-->
ಪತಿಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗಲೇ ಪತ್ನಿ ಹೃದಯಾಘಾತದಿಂದ ‌ಸಾವು: ಸಾವಿನಲ್ಲೂ ಒಂದಾದ ಸತಿ - ಪತಿ

ಪತಿಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗಲೇ ಪತ್ನಿ ಹೃದಯಾಘಾತದಿಂದ ‌ಸಾವು: ಸಾವಿನಲ್ಲೂ ಒಂದಾದ ಸತಿ - ಪತಿ

ಹುಬ್ಬಳ್ಳಿ: ಮದುವೆಯಾಗಿ 50-60 ವರ್ಷಗಳ ಕಾಲ ಜೊತೆಯಾಗಿ ಜೀವನ ನಡೆಸಿರುವ ಸತಿ - ಪತಿ ಸಾವಿನಲ್ಲೂ ಒಂದಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪ ಗ್ರಾಮದಲ್ಲಿ ನಡೆದಿದೆ.

ಪ್ರೀತಿಪಾತ್ರರಾದ ಪತಿಯ ಅಗಲಿಕೆಯನ್ನು ತಾಳಲಾರದ ಪತ್ನಿ, ಆತ ಸಾಗಿದ ದಾರಿಯಲ್ಲೇ ಪ್ರಯಾಣಿಸಿ ಅವರ ಪ್ರೀತಿ ಎಷ್ಟು ಗಟ್ಟಿ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ. ಪ್ರಗತಿಪರ ಕೃಷಿಕ ಶಿವಪುತ್ರಪ್ಪ ನೆಲಗುಡ್ಡ ( 90 ) ಹಾಗೂ ಅವರ ಪತ್ನಿ ಬಸಮ್ಮ ( 86 ) ಒಬ್ಬರ ಹಿಂದೊಬ್ಬರಂತೆ ಮೃತಪಟ್ಟ ಜೋಡಿ. 

ಅನಾರೋಗ್ಯದಿಂದ ಬಳಲುತ್ತಿದ್ದ ಶಿವಪುತ್ರಪ್ಪ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದರು. ಬಳಿಕ ಅವರ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಲು ವ್ಯವಸ್ಥೆ ಮಾಡಿದ್ದರು. ಅಂತ್ಯಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಪತ್ನಿ ಬಸಮ್ಮ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದರು. ಆ ಬಳಿಕ ಪತಿಯ ಅಂತ್ಯಕ್ರಿಯೆ ನಡೆದಿರುವ ಸ್ಥಳದ ಪಕ್ಕದಲ್ಲಿಯೇ ಪತ್ನಿಯ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article