ಗಾಝಿಯಾಬಾದ್: ಎಲ್‌ಇಡಿ ಟಿವಿ ಸ್ಫೋಟಗೊಂಡು ಬಾಲಕ ದಾರುಣ ಸಾವು

ಗಾಝಿಯಾಬಾದ್: ಎಲ್‌ಇಡಿ ಟಿವಿ ಸ್ಫೋಟಗೊಂಡು 16 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಬಾಲಕನ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಸ್ಪೋಟದಿಂದ ತೀವ್ರ ಗಾಯಗಳಾಗಿದ್ದ ಓಮೇಂದ್ರ ಎಂಬ ಬಾಲಕ ಮೃತಪಟ್ಟಿದ್ದಾನೆ. ಟಿವಿಯ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮನೆಯ ಕಾಂಕ್ರೀಟ್ ಫ್ಲ್ಯಾಬ್ ಹಾಗೂ ಗೋಡೆಯ ಒಂದು ಭಾಗ ಕುಸಿದಿದೆ. ಟಿವಿಯ ಚೂರುಗಳು ಸಿಡಿದು ಬಾಲಕನ ಮುಖ, ಎದೆ, ಕುತ್ತಿಗೆಗೆ ಗಾಯವಾಗಿತ್ತು ಎಂದು ಹೇಳಿದ್ದಾರೆ. 

ಅವರ ಮನೆಯಿಂದ ದೊಡ್ಡ ರೀತಿಯಲ್ಲಿ ಸ್ಫೋಟದ ಸದ್ದು ಕೇಳಿಸಿದೆ. ಅಡುಗೆ ಮನೆಯ ಸಿಲಿಂಡರ್ ಒಡೆದಿರಬೇಕು ಎಂದುಕೊಂಡೆ. ನಾವೆಲ್ಲ ಹೊರಕ್ಕೆ ಓಡಿ ಬಂದೆವು. ಪಕ್ಕದ ಮನೆಯಿಂದ ದಟ್ಟ ಹೊಗೆ ಬರುವುದು ಕಾಣಿಸಿದೆ ಎಂದು ಎಂದು ನೆರೆಮನೆಯ ವಿನಿತಾ ಹೇಳಿದ್ದಾರೆ. 

ಟಿವಿ ಸ್ಫೋಟಗೊಂಡ ವೇಳೆ ಓಮೇಂದ್ರ, ಆತನ ತಾಯಿ, ಅತ್ತಿಗೆ ಹಾಗೂ ಆತನ ಸ್ನೇಹಿತ ಕರಣ್ ಆ ಕೊಠಡಿಯಲ್ಲಿದ್ದರು. ಸ್ಫೋಟ ಶಕ್ತಿಶಾಲಿಯಾಗಿತ್ತು ಹಾಗೂ ಇಡೀ ಮನೆ ಕಂಪಿಸಿದೆ. ಗೊಡೆಗಳು ಭಾಗಶಃ ಕುಸಿದಿದೆ. ಎಂದು ಮತ್ತೊಂದು ಕೊಠಡಿಯಲ್ಲಿದ್ದ ಮೋನಿಕಾ ಘಟನೆಯ ಬಗ್ಗೆ ವಿವರ ನೀಡಿದ್ದಾರೆ. 

BREAKING NEWS
Loading latest news...
Join our WhatsApp Channel Powered By : Online Pudu