-->

ಪ್ರೇಯಸಿಯೊಂದಿಗೆ ಜಾಲಿ ಟೂರ್ ಮಾಡಿದ ಫೋಟೋಗಳನ್ನು ಪತ್ನಿಗೇ ಕಳುಹಿಸಿದ ಭೂಪ: ಮನನೊಂದು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ಪ್ರೇಯಸಿಯೊಂದಿಗೆ ಜಾಲಿ ಟೂರ್ ಮಾಡಿದ ಫೋಟೋಗಳನ್ನು ಪತ್ನಿಗೇ ಕಳುಹಿಸಿದ ಭೂಪ: ಮನನೊಂದು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ಚಿಕ್ಕಬಳ್ಳಾಪುರ: ಪ್ರೇಯಸಿಯೊಂದಿಗೆ ಪತಿ ಜಾಲಿ ಟೂರ್ ಮಾಡಿರುವ ಫೋಟೋಗಳನ್ನು ನೋಡಿ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಪ್ರಶಾಂತ ನಗರದ ಭಾರ್ಗವ್ ಎಂಬಾತನ ಪತ್ನಿ ಮೋನಿಕಾ(22) ಆತ್ಮಹತ್ಯೆಗೆ ಶರಣಾದ ಯುವತಿ.

ಮೋನಿಕಾ ಹಾಗೂ ಭಾರ್ಗವ್ ವಿವಾಹ ಕಳೆದ ಎಂಟು ತಿಂಗಳ ಹಿಂದೆ ವಿವಾಹ ನಡೆದಿತ್ತು. ಡಿಗ್ರಿ ವ್ಯಾಸಂಗ ಮಾಡುತ್ತಿರುವ ಮೋನಿಕಾ ತವರು ಮನೆಗೆ ಬಂದಿದ್ದರು‌. ಈ ವೇಳೆ ಭಾರ್ಗವ್ ಹಳೆಯ ಪ್ರೇಯಸಿ ಆತನ ಸಂಪರ್ಕಕ್ಕೆ ಬಂದಿದ್ದಳು. ಭಾರ್ಗವದ ಆಕೆಯೊಂದಿಗೆ ಜಾಲಿ ಟೂರ್ ಮಾಡಿದ್ದಾನೆ‌‌. ಈ ಸಂದರ್ಭ ಭಾರ್ಗವ್ ಪ್ರೇಯಸಿಯೊಂದಿಗಿದ್ದ ಫೋಟೋಗಳನ್ನು ಕ್ಲಿಕ್ಕಿಸಿದ್ದಾನೆ. ಅದನ್ನು ಪತ್ನಿಗೂ ಕಳುಹಿಸಿದ್ದಾನೆ.

ಪತಿ ಪ್ರೇಯಸಿಯೊಂದಿಗಿದ್ದ ಫೋಟೋಗಳನ್ನು ನೋಡಿದ ಮೋನಿಕಾ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article