-->

ತನ್ನ ತಾಯಿಯ ವಿರುದ್ಧವೇ ಠಾಣೆಯಲ್ಲಿ ದೂರು ದಾಖಲಿಸಿದ ಮೂರು ವರ್ಷದ ಮಗು: ನಗುನಗುತ್ತಲೇ ದೂರು ಸ್ವೀಕರಿಸುವಂತೆ ನಟಿಸಿದ ಪಿಎಸ್ಐ

ತನ್ನ ತಾಯಿಯ ವಿರುದ್ಧವೇ ಠಾಣೆಯಲ್ಲಿ ದೂರು ದಾಖಲಿಸಿದ ಮೂರು ವರ್ಷದ ಮಗು: ನಗುನಗುತ್ತಲೇ ದೂರು ಸ್ವೀಕರಿಸುವಂತೆ ನಟಿಸಿದ ಪಿಎಸ್ಐ


ಭೋಪಾಲ್: ತನ್ನಮ್ಮ ಕ್ಯಾಂಡಿಗಳನ್ನು ತಿನ್ನಲು ಬಿಡುತ್ತಿಲ್ಲವೆಂದು ಮೂರು ವರ್ಷದ ಮಗುವೊಂದು ಪೊಲೀಸ್ ಠಾಣೆಗೆ ತೆರಳಿ ಅಮ್ಮನ ವಿರುದ್ಧವೇ ದೂರು ದಾಖಲಿಸಿರುವ ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪುರ್‌ನಲ್ಲಿ ನಡೆದಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪೊಲೀಸ್ ದೂರು ದಾಖಲಿಸಿದ ಮೂರು ವರ್ಷದ ಮಗುವಿನ ಹೆಸರು ಸದ್ದಾಂ. ತನ್ನ ಅಮ್ಮ ಕ್ಯಾಂಡಿಗಳನ್ನು ಕದ್ದು, ಕಪಾಳಕ್ಕೆ ಬಾರಿಸಿದ್ದಾಳೆಂದು ಮಗು ಅಮ್ಮನ ವಿರುದ್ಧವೇ ದೂರು ದಾಖಲಿಸಿದೆ. ಠಾಣೆಗೆ ಕರೆದೊಯ್ಯುವಂತೆ ಅಪ್ಪನ ಬಳಿ ಹಠಹಿಡಿದು, ಸಬ್ ಇನ್ ಸ್ಪೆಕ್ಟರ್ ಬಳಿ ಬಂದು ಮಗು ತಾಯಿಯ ವಿರುದ್ಧ ದೂರು ನೀಡಿದೆ. 

ವೈರಲ್ ಆಗಿರುವ ವೀಡಿಯೋದಲ್ಲಿ 3 ವರ್ಷದ ಮಗು ಬುರ್ಹಾನ್‌ಪುರ್‌ನ ಡೆಡ್ತಲೈದಲ್ಲಿರುವ ಪೊಲೀಸ್ ಠಾಣೆಗೆ ತೆರಳಿದೆ. ಅಲ್ಲಿನ ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕಾ ನಾಯಕ್ ಅವರಿಗೆ ತನ್ನ ನೋವಿನ ಕತೆ ಹೇಳಿಕೊಳ್ಳುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. 'ನನ್ನ ಅಮ್ಮ ನನ್ನ ಕ್ಯಾಂಡಿಗಳನ್ನು ಕದ್ದಿದ್ದಾರೆ. ಆಕೆಯನ್ನು ಜೈಲಿಗೆ ಹಾಕಿ' ಎಂದು ಮಗು ಮುಗ್ಧವಾಗಿ, ಸಬ್ ಇನ್ಸ್‌ಪೆಕ್ಟರ್‌ಗೆ ಹೇಳಿದೆ. 

ಮಗುವಿನ ಮುಗ್ಧತೆಯನ್ನು ನೋಡಿ, ನಗೆಗಡಲಲ್ಲಿನ ತೇಲಿದ ಎಸ್‌ಐ ಪ್ರಿಯಾಂಕಾ, ತಮ್ಮ ನಗುವನ್ನು ನಿಯಂತ್ರಿಸಲು ಪರದಾಡಿದ್ದಾರೆ. ಮಗುವಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ದೂರು ಬರೆದುಕೊಳ್ಳುತ್ತಿರುವಂತೆ ನಟಿಸುತ್ತಾರೆ . ಬಳಿಕ ಮಗು ಪೇಪರ್‌ಗೆ ಸಹಿ ಮಾಡುತ್ತದೆ . ಆದಷ್ಟು ಬೇಗ ನಿಮ್ಮ ಅಮ್ಮನನ್ನು ಬಂಧಿಸುವುದಾಗಿ ಹೇಳಿ ಭರವಸೆ ನೀಡಿ ಕಳುಹಿಸುವುದು ವಿಡಿಯೋದಲ್ಲಿದೆ.

ಮಗುವಿನ ತಂದೆ ಈ ಬಗ್ಗೆ ಪ್ರತಿಕ್ರಿಯಿಸಿ, ಸದ್ದಾಂ ಕ್ಯಾಂಡಿಗಳನ್ನು ಕೇಳಿದಾಗ ತಾಯಿ ಮೃದುವಾಗಿ ಕೆನ್ನೆಗೆ ಬಾರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆತ ತನ್ನ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಹೇಳಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ವೀಡಿಯೋ ತುಣುಕು ವೈರಲ್ ಆದ ನಂತರ , ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಮಗುವಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದು , ದೀಪಾವಳಿಯಂದು ಮಗುವಿಗೆ ಚಾಕೊಲೇಟ್ ಮತ್ತು ಸೈಕಲ್ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ .

Ads on article

Advertise in articles 1

advertising articles 2

Advertise under the article