-->

ಪ್ಲೇಟ್‌ಲೆಟ್ಸ್ ಎಂದು ಮೂಸಂಬಿ ಜ್ಯೂಸ್ ನೀಡಿ ರೋಗಿ ಮೃತ್ಯು: ಇದರ ಬೆನ್ನಲ್ಲೇ ಕರಾಳ ದಂಧೆ ಬಯಲು

ಪ್ಲೇಟ್‌ಲೆಟ್ಸ್ ಎಂದು ಮೂಸಂಬಿ ಜ್ಯೂಸ್ ನೀಡಿ ರೋಗಿ ಮೃತ್ಯು: ಇದರ ಬೆನ್ನಲ್ಲೇ ಕರಾಳ ದಂಧೆ ಬಯಲು


ನವದೆಹಲಿ: ರೋಗಿಯೋರ್ವರಿಗೆ ಪ್ಲೇಟ್‌ಲೆಟ್ಸ್ ಕೊಡುವ ಬದಲು ಮೂಸಂಬಿ ಜ್ಯೂಸ್ ಕೊಟ್ಟ ಪರಿಣಾಮ ಆ ರೋಗಿ ಸಾವಿಗೀಡಾದ ಪ್ರಕರಣ ಉತ್ತರಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಬಹಿರಂಗಗೊಂಡಿದೆ. ಇದರ ಬೆನ್ನಿಗೇ ಇಲ್ಲಿನ ಕರಾಳ ದಂಧೆಯೊಂದು ಬಯಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರಲ್ಲಿ ಡೆಂಗ್ ನಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಪ್ಲೇಟ್‌ಲೆಟ್ಸ್ ಎಂದು ಮೂಸಂಬಿ ಜ್ಯೂಸ್ ಅನ್ನು ದೇಹಕ್ಕೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಆ ರೋಗಿ ಸಾವಿಗೀಡಾಗಿದ್ದಾರೆ. ಈ ಹಿನ್ನಲೆಯಲ್ಲಿ ನಕಲಿ ಪ್ಲೇಟ್‌ಲೆಟ್ ಮಾರಾಟದ ಆರೋಪದ ಮೇಲೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ ಆ ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸ್ಪರ್ಶ ಹಾಗೂ ಬಣ್ಣ ಎರಡರಲ್ಲೂ ಈ ಬ್ಲಡ್ ಪ್ಲಾಸ್ಮಾ ಮೂಸಂಬಿ ಜ್ಯೂಸ್‌ನಂತೆ ಹೋಲುವುದರಿಂದ ಅದನ್ನು ಪ್ಲೇಟ್‌ಲೆಟ್ ಎಂದು ಸುಳ್ಳು ಹೇಳಿ ಮಾರಾಟ ಮಾಡುವ ದಂಧೆಯೊಂದು ನಡೆಯುತ್ತಿದೆ ಎನ್ನಲಾಗಿದ್ದು , ಪೊಲೀಸರು ಈ ಕುರಿತು ಹೆಚ್ಚಿನ ತನಿಖೆಗೆ ಇಳಿದಿದ್ದಾರೆ .

Ads on article

Advertise in articles 1

advertising articles 2

Advertise under the article