ವಿಟ್ಲ: ಅಶ್ಲೀಲ ವೀಡಿಯೋ ಮೆಮರಿ ಕಾರ್ಡ್ ಎಸೆದು ಯುವತಿಯರನ್ನು ಸೆಳೆಯಲೆತ್ನಿಸುತ್ತಿದ್ದ ಆರೋಪಿ ಸೆರೆ

ವಿಟ್ಲ: ಅಶ್ಲೀಲ ವೀಡಿಯೋ, ಚಿತ್ರಗಳು ತುಂಬಿರುವ ಮೆಮರಿ ಕಾರ್ಡ್ ಅನ್ನು ದಾರಿಹೋಕ ಯುವತಿಯರಿಗೆ ಎಸೆದು ಅವರನ್ನು ಸೆಳೆಯಲೆತ್ನಿಸುತ್ತಿದ್ದ ಕಾಮುಕನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಗೋಳ್ತಮಜಲು ನಿವಾಸಿ ಕೆ.ಶಮೀರ್(39) ಬಂಧಿತ ಆರೋಪಿ.

ಬುಡೋಳಿಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆ.ಶಮೀರ್ ಕೆಲ ದಿನಗಳಿಂದ ಇದೇ ರೀತಿ ಮಾಡುತ್ತಿದ್ದ ಎನ್ನಲಾಗಿದೆ. ಬಾಲಕಿಯೊಬ್ಬಳಿಗೆ ಈ ಅಶ್ಲೀಲ ಚಿತ್ರಗಳು ತುಂಬಿರುವ ಮೆಮರಿ ಕಾರ್ಡ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu