ಮಂಗಳೂರು: ನಿಷೇಧಿತ ಪಿಎಫ್ಐ ಸಂಘಟನೆಯ ಐವರು ಕಾರ್ಯಕರ್ತರು ಅರೆಸ್ಟ್

ಮಂಗಳೂರು: ಎಸ್ ಡಿಪಿಐ ಹಾಗೂ‌ ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತರು, ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಮಂಗಳೂರು ನಗರದ ಪಣಂಬೂರು, ಸುರತ್ಕಲ್, ಉಳ್ಳಾಲ, ಮಂಗಳೂರು ಗ್ರಾಮಾಂತರ ಸೇರಿದಂತೆ ಏಳೆಂಟು ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಐವರು ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇವರ ಮೇಲೆ UAPA Act, sec121 ಸೇರಿ ವಿವಿಧ ಐಪಿಸಿ ಸಕ್ಷೆನ್ ಅಡಿ ಪ್ರಕರಣ ದಾಖಲಾಗಿದೆ.

ಕೇಂದ್ರ ಸರಕಾರವು ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿದ ಬಳಿಕ ಇದು ಮೊದಲನೆಯ ದಾಳಿಯಾಗಿದೆ‌. ಪಿಎಫ್ಐ ಸಂಘಟನೆಯ ನಿಷೇಧಕ್ಕಿಂತ ಮೊದಲು ಎನ್ಐಎ, ರಾಜ್ಯ ಪೊಲೀಸ್ ತಂಡ ನಡೆಸಿರುವ ದಾಳಿಯಲ್ಲಿ ಹಲವಾರು ಪಿಎಫ್ಐ ಕಾರ್ಯಕರ್ತರು, ಮುಖಂಡರನ್ನು ಬಂಧಿಸಲಾಗಿತ್ತು. 
BREAKING NEWS
Loading latest news...
Join our WhatsApp Channel Powered By : Online Pudu