ಕ್ಯಾಲಿಫೋರ್ನಿಯಾ: 8 ತಿಂಗಳ ಹಸುಗೂಸು ಸಹಿತ ಭಾರತೀಯ ಮೂಲದ ನಾಲ್ವರ ಅಪಹರಣ

ಕ್ಯಾಲಿಫೋರ್ನಿಯ: 8 ತಿಂಗಳ ಹಸುಗೂಸುವಿನೊಂದಿಗೆ ಸಹಿತ ಭಾರತ ಮೂಲದ ನಾಲ್ವರನ್ನು ಶಸ್ತ್ರಸಜ್ಕಿತ ದುಷ್ಕರ್ಮಿಗಳು ಅಪಹರಿಸಿರುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಇಲ್ಲಿನ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಲ್ಲಿ ಸೋಮವಾರ 8 ತಿಂಗಳ ಹೆಣ್ಣು ಮಗು ಹಾಗೂ ಆ ಮಗುವಿನ ಪೋಷಕರ ಸಹಿತ ನಾಲ್ವರನ್ನು ಅಪಹರಿಸಲಾಗಿದೆ ಎನ್ನಲಾಗಿದೆ. 

ಜಸ್ಟೀಪ್ ಸಿಂಗ್ ( 36 ) , ಜಸ್ಟೀನ್ ಕೌರ್ ( 27 ) , ಅವರ 8 ತಿಂಗಳ ಮಗು ಅರೂಹಿ ಧೇರಿ, ಹಾಗೂ ಅಮನ್‌ದೀಪ್ ಸಿಂಗ್ ( 39 ) ಅವರನ್ನು ಅಪಹರಿಲಾಗಿದೆ ಎಂದು ಮರ್ಸಿಡ್ ಕೌಂಟಿ ಶೆರಿಫ್ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಶಂಕಿತ ಅಪಹರಣಕಾರರು ಶಸ್ತ್ರಸಜ್ಜಿತ ಮತ್ತು ಅಪಾಯಕಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ತನಿಖೆ ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಲ್ಲರೆ ವ್ಯಾಪಾರಿಗಳು ಮತ್ತು ರೆಸ್ಟೋರೆಂಟ್‌ಗಳಿರುವ ಸ್ಥಳದಿಂದ ನಾಲ್ವರನ್ನು ಅಪಹರಿಸಲಾಗಿದೆ. ಶಂಕಿತ ಮತ್ತು ಅಪಹರಣದ ಉದ್ದೇಶದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu