ಶಿವಮೊಗ್ಗ: 10ಕೋಟಿ ರೂ. ಬೆಲೆಯ ಶ್ವಾನದ ಸೆಲ್ಫಿಗೆ ಮುಗಿ ಬಿದ್ದ ಜನತೆ

ಶಿವಮೊಗ್ಗ: ನಗರದ ಗಾಂಧಿ ಪಾರ್ಕ್​ನಲ್ಲಿ ದಸರಾ ಹಬ್ಬದ ಹಿನ್ನೆಲೆ ನಡೆದ ಶ್ವಾನ ಪ್ರದರ್ಶನದಲ್ಲಿ ಬರೋಬ್ಬರಿ 10 ಕೋಟಿ ರೂ. ಬೆಲೆಯ ಟಿಬೆಟಿಯನ್ ಮಸ್ತಿಫ್ ಎಂಬ ಶ್ವಾನ ನೋಡುಗರ ಗಮನ ಸೆಳೆಯಿತು. 

ಬೆಂಗಳೂರಿನ ಸತೀಶ್ ಎಂಬವರಿಗೆ ಸೇರಿರುವ ಈ ಶ್ವಾನವು ಶ್ವಾನ ಪ್ರದರ್ಶನದ ಮುಖ್ಯ ಕೇಂದ್ರ ಬಿಂದುವಾಗಿತ್ತು. ಭೀಮ ಎಂಬ ಹೆಸರಿನ ಈ ಟಿಬೆಟಿಯನ್ ಮಸ್ತಿಫ್ ಎಂಬ ತಳಿಯ ಶ್ವಾನವನ್ನು ನೋಡಲು ನೂರಾರು ಜನರು ಮುಗಿಬಿದ್ದಿದ್ದರು.

ಈ ಶ್ವಾನಕ್ಕೆ ಎಸಿ ಜೊತೆಗೆ ಕ್ಲಾಸಿ ಫುಡ್ ನೀಡಲಾಗುತ್ತದೆ. ತಿಂಗಳಿಗೆ ಕನಿಷ್ಠ 25 ಸಾವಿರ ರೂ‌. ಇದರ ನಿರ್ವಹಣೆಗೆ ಬೇಕಾಗುತ್ತದೆ. ಒಟ್ಟಾರೆ ಶ್ವಾನ ಪ್ರದರ್ಶನದಲ್ಲಿ 10 ಕೋಟಿಯ ಶ್ವಾನ ನೋಡಲು ಹಾಗೂ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ಜನ ಭಾಗವಹಿಸಿದ್ದು ವಿಶೇಷವಾಗಿತ್ತು.



BREAKING NEWS
Loading latest news...
Join our WhatsApp Channel Powered By : Online Pudu