-->
OP - Pixel Banner ad
Sulya:- ಸುಳ್ಯದಲ್ಲಿ ತಲ್ವಾರ್ ಹಿಡಿದುಕೊಂಡು  ಆತಂಕ ಸೃಷ್ಟಿ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಪೊಲೀಸರು..!

Sulya:- ಸುಳ್ಯದಲ್ಲಿ ತಲ್ವಾರ್ ಹಿಡಿದುಕೊಂಡು ಆತಂಕ ಸೃಷ್ಟಿ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಪೊಲೀಸರು..!

ಸುಳ್ಯ 

ತಲ್ವಾರ್ ಹಿಡಿದು ಊರಿಡೀ ಸುತ್ತಿ ಭಯದ ವಾತಾವರಣ ನಿರ್ಮಿಸಿದ ಸುಳ್ಯದ ಕನಕಮಜಲಿನ ಸಂದೀಪ್ ಎಂಬ ಯುವಕನ ವಿರುದ್ಧ ಪ್ರಕರಣ ದಾಖಲಾದ ಘಟನೆ  ಸುಳ್ಯದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಸೂಕ್ಷ್ಮ  ವಾತಾವರಣ ಇದ್ದ ಹೊರತಾಗಿಯೂ ಈತ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಹಿಡಿದುಕೊಂಡು ರಸ್ತೆಯಲ್ಲಿ ತಿರುಗಾಟ ನಡೆಸಿ ಹುಚ್ಚಾಟ ಪ್ರದರ್ಶಿಸಿದ್ದ. ಇದರಿಂದ ಸ್ಥಳೀಯರಲ್ಲಿ ಒಂದು ರೀತಿಯ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಈತನ ಅತಿರೇಕದ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ  ಪ್ರತಿಕ್ರಿಯಿಸಿದ ಸುಳ್ಯ ಸಬ್ ಇನ್ಸ್‌ ಪೆಕ್ಟರ್  ದಿಲೀಪ್ ಜಿ.ಆರ್‌ ಅವರು, ಯುವಕ ಮದ್ಯಪಾನ ಮಾಡಿ ನಿಯಂತ್ರಣ ಕಳೆದುಕೊಂಡು ತಲ್ವಾರ್ ಹಿಡಿದುಕೊಂಡು ಓಡಾಡಿದ್ದಾನೆ. ಆದರೆ ಈತ ಯಾರಿಗೂ ಆತ ಸಮಸ್ಯೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದಿದ್ದಾನೆ. ಕುಡಿತ ಮತ್ತಿನಲ್ಲಿ ಸುಮ್ಮನೆ ಮನೆಯ ಕಡೆಗೆ ತಲ್ವಾರ್ ಹಿಡಿದುಕೊಂಡು ಹೋಗುತ್ತಿದ್ದ ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ.ಆದರೂ ಆತನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242