-->
ಕೆನಡಾ: ಗುಂಡಿನ ಚಕಮಕಿಯಲ್ಲಿ ಒಂದೂವರೆ ವರ್ಷದ ಮಗು ಸಾವು ಪ್ರಕರಣ; ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ನರಹತ್ಯೆ ಆರೋಪ

ಕೆನಡಾ: ಗುಂಡಿನ ಚಕಮಕಿಯಲ್ಲಿ ಒಂದೂವರೆ ವರ್ಷದ ಮಗು ಸಾವು ಪ್ರಕರಣ; ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ನರಹತ್ಯೆ ಆರೋಪ

ಮಾಂಟ್ರಿಯಲ್: ಕೆನಡಾದ ಒಂಟಾರಿಯೊದಲ್ಲಿ 2020 ರಲ್ಲಿ ನಡೆದಿರುವ ಗುಂಡಿನ ದಾಳಿಗೆ ಒಂದೂವರೆ ವರ್ಷದ ಹಸುಗೂಸಿನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ನರಹತ್ಯೆಯ ಆರೋಪ ಹೊರಿಸಲಾಗಿದೆ ಎಂದು ಕೆನಡಾ ಸರಕಾರ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

2020ರ ನವೆಂಬರ್ 26ರಂದು ಟೊರೊಂಟೊದಿಂದ ಉತ್ತರಕ್ಕೆ 100 ಕಿ.ಮೀ. ದೂರದಲ್ಲಿರುವ ಕವರ್ತಾ ಲೇಕ್ಸ್‌ನಲ್ಲಿ ಜೇಮ್ರನ್ ಶಪಿರೋ ಎಂಬ ಮಗುವಿನ ತಂದೆ ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ಮಗು ಗುಂಡೇಟಿಗೆ ಸಿಲುಕಿ ಸಾವನ್ನಪ್ಪಿತ್ತು. ಶಪಿರೋ ತನ್ನ ತಂದೆಯ ಪಿಕಪ್ ಟ್ರಕ್‌ನಲ್ಲಿದ್ದಾಗ ಗುಂಡೇಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿತ್ತು. ಈ ಪ್ರಕರಣವು ಕೆನಡಾದಲ್ಲಿ ಭಾರೀ ಸುದ್ದಿ ಮಾಡಿತ್ತು .

ಕೆನಡಾದಲ್ಲಿ ಬಂದೂಕು ಸಂಬಂಧಿತ ಘಟನೆಗಳು ಎಲ್ಲಾ ಹಿಂಸಾತ್ಮಕ ಅಪರಾಧಗಳಲ್ಲಿ ಮೂರು ಪ್ರತಿಶತಕ್ಕಿಂತ ಕಡಿಮೆಯಿವೆ. ವಿಶೇಷ ತನಿಖಾ ಘಟಕದ ನಿರ್ದೇಶಕ ಜೋಸೆಫ್ ಮಾರ್ಟಿನೊ 18 ತಿಂಗಳ ಜೇಮ್ರನ್ ಶಪಿರೋ ಎಂಬ ಮಗುವಿನ ಸಾವಿಗೆ ಸಂಬಂಧಿಸಿದಂತೆ ಮೂವರು ಒಂಟಾರಿಯೊ ಪ್ರಾಂತೀಯ ಪೊಲೀಸ್ ಅಧಿಕಾರಿಗಳು ಕ್ರಿಮಿನಲ್ ಅಪರಾಧಗಳನ್ನು ಎಸಗಿದ್ದಾರೆಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದು ಸ್ವತಂತ್ರ ಫೆಡರಲ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article