-->
Sullya :-ಪ್ರವೀಣ್ ನನ್ನು ಕೊಲೆಗಡುಕರಿಗೆ ತೋರಿಸಿಕೊಟ್ಟವರು ಇಲ್ಲಿಯವರೇ ಇರಬಹುದು. ಈ ಕೊಲೆ ಪಿಎಫ್ಐ ಯವರು ಮಾಡುವ ಕೊಲೆ ತರಹ ಕಾಣುತ್ತಿದೆ..! ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

Sullya :-ಪ್ರವೀಣ್ ನನ್ನು ಕೊಲೆಗಡುಕರಿಗೆ ತೋರಿಸಿಕೊಟ್ಟವರು ಇಲ್ಲಿಯವರೇ ಇರಬಹುದು. ಈ ಕೊಲೆ ಪಿಎಫ್ಐ ಯವರು ಮಾಡುವ ಕೊಲೆ ತರಹ ಕಾಣುತ್ತಿದೆ..! ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಸುಳ್ಯ

ಪಿಎಫ್ಐಯ ಕೊಲೆಗಡುಕರು ಸಿರಿಯಾ, ಪಾಕಿಸ್ತಾನದಲ್ಲಿ ಹೋಗಿ ತರಬೇತಿ ಪಡೆದು ಬಂದ ಬಗ್ಗೆ ಮಾಹಿತಿ ಇದೆ. ಪ್ರವೀಣ್ ಅವರ ಕೊಲೆಯನ್ನೂ ಪಿಎಫ್ಐ ಮಾಡಿರುವ ಅನುಮಾನ ಇದೆ. ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರು.

ಅವರು  ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನಾ ಹೇಳಿ ಮಾಧ್ಯಮದೊಂದಿಗೆ ಮಾತನಾಡಿದರು.
ಪ್ರವೀಣ್ ಅವರನ್ನು ಕೊಲೆ ಮಾಡಲು ಇವರೇ ಪ್ರವೀಣ್ ಅಂತ ತೋರಿಸಿಕೊಟ್ಟವರು ಇಲ್ಲಿನ ಜನರೇ ಇರಬಹುದು. ಈ ಕೊಲೆ ಕೇರಳ ಮಾದರಿಯಲ್ಲಿ ಮಾಡಲಾಗಿದೆ. ಈ ತರಹ ಕೊಲೆ ಮಾಡುವುದು ಪಿಎಫ್ಐ ಕೊಲೆ ಮಾಡುವ ರೀತಿ. ಇದಕ್ಕೆ ಇವರು ಸಿರಿಯಾ, ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದು ಬಂದಿದ್ದಾರೆ. ರುದ್ರೇಶ್ ಕೊಲೆಯನ್ನೂ ಇದೇ ಪಿಎಫ್ಐ ಮಾಡಿ ಇದೀಗ ಅವರು ಜೈಲಲ್ಲಿ ಇದ್ದಾರೆ. ಈಗಾಗಲೇ ಪ್ರವೀಣ್ ಹತ್ಯೆ ಪ್ರಕರಣವನ್ನು ಏನ್ಐಎ ಗೆ ವಹಿಸಲಾಗಿದೆ. ಅಮಿತ್ ಶಾ ಅವರಿಗೂ ವಿಷಯವನ್ನು ಮನವರಿಕೆ ಮಾಡಿ ಮನವಿ ನೀಡಿದ್ದೇನೆ. ಏನ್ಐಎ ಈಗಾಗಲೇ ತನಿಖೆ ಆರಂಭಿಸಿದೆ. ಕೇರಳದ ತಲಶೇರಿಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article