ಇವನೆಂಥಹಾ ಕಾಮುಕ..!: ಹೆತ್ತವ್ವೆಯನ್ನೇ ಎರಡೆರಡು ಬಾರಿ ಅತ್ಯಾಚಾರಗೈದ ಪುತ್ರ

ದಾಂಡೇಲಿ: ಇಲ್ಲೊಬ್ಬ ಕಾಮುಕ ಹೆತ್ತವ್ವೆಯನ್ನೇ ಎರಡೆರಡು ಬಾರಿ ಈತ ಅತ್ಯಾಚಾರ ಎಸಗಿದ್ದಾನೆ‌ ಎಂದರೆ ಇವನೆಂಥಹಾ ಕಾಮುಕನಿರಬಹುದು‌. ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ದಾಂಡೇಲಿ ಪಟ್ಟಣದ ಅರಣ್ಯ ಇಲಾಖೆಯ ಡಿಪೊ ನಿವಾಸಿ ರೋಕಿ ಜಾನ್ ಪುಡ್ತೋಳ(24) ಕಾಮುಕ ಪುತ್ರ. 52 ವರ್ಷದ ಈತನ ತಾಯಿಯ ಮೇಲೆ ರವಿವಾರ ಬೆಳಗ್ಗಿನ ಜಾವ ಕೃತ್ಯ ಎಸಗಿದ್ದಾನೆ.

ಶನಿವಾರ ರಾತ್ರಿ ಮದ್ಯ ಸೇವಿಸಿ ಬಂದಿರುವ ರೋಕಿ ಜಾನ್ ಪುಡ್ತೋಳ ಮಧ್ಯರಾತ್ರಿ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಆಘಾತಕ್ಕೀಡಾದ ಆತನ ತಾಯಿ ಪುತ್ರನಿಂದ ತಪ್ಪಿಸಿಕೊಂಡು ಕೋಣೆ ಸೇರಿಕೊಂಡಿದ್ದರು‌. ಆದರೆ ಬೆಳಗ್ಗಿನ ಜಾವ ಬೆದರಿಕೆಯೊಡ್ಡಿ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.