ಮಂಗಳೂರು: ಮುಸ್ಲಿಮರನ್ನು ಡಿಕೆಶಿ ಕಡೆಗಣಿಸುತ್ತಿದ್ದಾರೆಂಬುದು ಸುಳ್ಳು

ಮಂಗಳೂರು: ಡಿ.ಕೆ.ಶಿವಕುಮಾರ್ ಮುಸ್ಲಿಮರನ್ನು ಕಡೆಗಣಿಸುತ್ತಿರುವ ಆರೋಪ ಸುಳ್ಳು. ನಾನು ಮುಸ್ಲಿಂ ಸಮುದಾಯದವನು, ನನ್ನನ್ನು ಯೂತ್ ಅಧ್ಯಕ್ಷ ಮಾಡಿರೋದು ಅವರೇ. ನನ್ನ ಕೈಹಿಡಿದು ಇಲ್ಲಿ ತನಕ ಬಂದು ಬಿಟ್ಟಿದ್ದಾರೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ - ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಗೆ ಅತೀ ಹೆಚ್ಚಿನ ಸೀಟು ದೊರಕಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಹಿರಿಯ ನಾಯಕ ಹರಿಪ್ರಸಾದ್ ಯೂತ್ ಕಾಂಗ್ರೆಸ್ ಹಿನ್ನಲೆಯಿಂದಲೇ ಬಂದವರು. ಅವರು ಯುವಕರಿಗೆ ಒಳ್ಳೆಯ ಅದ್ಯತೆ ನೀಡುವ ನಂಬಿಕೆಯಿದೆ ಎಂದರು.

ಸಿಎಂ ಯಾರು ಆಗಬೇಕೆಂಬುದು ದೊಡ್ಡವರ ವಿಚಾರ. ಯೂತ್ ಕಾಂಗ್ರೆಸ್ ಈ ವಿಚಾರದಲ್ಲಿ ಮಾತನಾಡುವುದಿಲ್ಲ. ಪಕ್ಷ ಸಂಘಟನೆ, ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೇ ಯೂತ್ ಕಾಂಗ್ರೆಸ್ ನ ಉದ್ದೇಶ. ಯಾರೂ ಬೇಕಾದರೂ ಸಿಎಂ ಆಗಲಿ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಎಲ್ಲೂ ಈ ಬಗ್ಗೆ ಮಾತನಾಡಿಲ್ಲ.‌ ಬಾಕಿ ಇರುವವರು ಈ ಬಗ್ಗೆ ಮಾತನಾಡುತ್ತಿದ್ದಾರೆ ಅವರಿಬ್ಬರಲ್ಲಿ ಭಿನ್ನಾಭಿಪ್ರಾಯಗಳಿಲ್ಲ ಎಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದರು.