-->
ಬೆತ್ತಲೆ ಫೋಟೊಶೂಟ್ ಮಾಡಿರುವ ರಣವೀರ್ ಸಿಂಗ್ ಮೇಲೆ ಎಫ್ಐಆರ್ ದಾಖಲು!

ಬೆತ್ತಲೆ ಫೋಟೊಶೂಟ್ ಮಾಡಿರುವ ರಣವೀರ್ ಸಿಂಗ್ ಮೇಲೆ ಎಫ್ಐಆರ್ ದಾಖಲು!

ಮುಂಬೈ: ಸಂಪೂರ್ಣ ಬೆತ್ತಲೆ ಫೋಟೊಶೂಟ್ ಮಾಡಿರುವ ಮೂಲಕ ಭಾರೀ ಚರ್ಚೆಯನ್ನು ಹುಟ್ಟು ಹಾಕಿರುವ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಮಹಿಳೆಯರ ಭಾವನೆಗೆ ಧಕ್ಕೆಯಾಗಿರುವ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

ರಣವೀರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 509 , 294 ಮತ್ತು ಐಟಿ ಕಾಯ್ದೆ 67 ಎ ಸೆಕ್ಷನ್ ಅಡಿಯಲ್ಲಿ ಮುಂಬೈನ ಚೆಂಬೂರ್ ಠಾಣಾ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ. ಪೂರ್ವ ಮುಂಬೈ ಉಪನಗರ ಮೂಲದ ಎನ್‌ಜಿಒ ಪದಾಧಿಕಾರಿಗಳು ಹಾಗೂ ಮಹಿಳಾ ವಕೀಲರು ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದಾರೆ. ರಣವೀರ್ ಸಿಂಗ್ ತಮ್ಮ ಬೆತ್ತಲೆ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಮಹಿಳೆಯರ ನಮ್ರತೆಗೆ ಅಪಮಾನ ಎಸಗಿದ್ದಾರೆ ಎಂದು ಎನ್‌ಜಿಒ ಪದಾಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೆ , ರಣವೀರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ರಣವೀರ್ ಸಿಂಗ್ ಮ್ಯಾಗಜಿನ್ ಒಂದರ ಮುಖಪುಟಕ್ಕಾಗಿ ಸಂಪೂರ್ಣ ಬೆತ್ತಲೆಯಾಗಿ ಕ್ಯಾಮೆರಾಕ್ಕೆ ಪೋಸ್ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ರಣವೀರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬಳಿಕ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದರ ಬಗ್ಗೆ ಪರ ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. 

Ads on article

Advertise in articles 1

advertising articles 2

Advertise under the article