-->
ಪಿ.ಡೀಕಯ್ಯ ಸಾವಿನ ಬಗ್ಗೆ ಶಂಕೆ:  ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ

ಪಿ.ಡೀಕಯ್ಯ ಸಾವಿನ ಬಗ್ಗೆ ಶಂಕೆ: ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ

ಮಂಗಳೂರು: ಹಿರಿಯ ದಲಿತ ಮುಖಂಡ ಪಿ.ಡೀಕಯ್ಯರವರ ಸಾವಿನ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿ ದೂರು ನೀಡಿರುವ ಹಿನ್ನಲೆಯಲ್ಲಿ ಬೆಳ್ತಂಗಡಿಯ ಪದ್ಮುಂಜದಲ್ಲಿ ಹೂತಿರುವ ಮೃತದೇಹವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 

ದಲಿತ ಮುಖಂಡ, ಬಹುಜನ ಚಳುವಳಿಯ ಹಿರಿಯ ಮುಂದಾಳು ಪಿ.ಡೀಕಯ್ಯರವರು ಜುಲೈ 8ರಂದು ತೀವ್ರ ಮೆದುಳು ರಕ್ತಸ್ರಾವದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ಹೇಳಲಾಗಿತ್ತು. ಆದರೆ ಇದೀಗ ಕುಟುಂಬಸ್ಥರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ‌. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಮ್ ಸಮ್ಮುಖದಲ್ಲಿ ಇಂದು ಡೀಕಯ್ಯರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪತ್ನಿ ಪದ್ಮುಂಜದ ಕುಟುಂಬದ ಮನೆಯಲ್ಲಿದ್ದ ಸಂದರ್ಭ ಡೀಕಯ್ಯನವರು ಗರ್ಡಾಡಿಯ ತಮ್ಮ ಮನೆಯಲ್ಲಿ ಅಸ್ವಸ್ಥರಾಗಿದ್ದರು. ಬೆಳಗ್ಗೆ ಮನೆಯವರು ಬಂದ ವೇಳೆ ಬಾಗಿಲು ತೆಗೆಯದಿರುವ ಹಿನ್ನೆಲೆಯಲ್ಲಿ ಬಾಗಿಲನ್ನು ಒಡೆದು ಮನೆಯೊಳಗೆ ಹೋದಾಗ ಅವರು ಅಡುಗೆ ಮನೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ತಕ್ಷಣ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಇದೀಗ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕುಟುಂಬಿಕರು ದೂರು ನೀಡಿದ ಬಳಿಕ ಬೆಳ್ತಂಗಡಿ ಪೊಲೀಸರು ಒಟ್ಟು ಘಟನೆಯ ತನಿಖೆ ಆರಂಭಿಸಿದ್ದಾರೆ. ನಿಯಮದಂತೆ ಮಹಜರು ನಡೆಸಿ, ಬಳಿಕ ದಫನ್ ಮಾಡಲಾಗಿರುವ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Ads on article

Advertise in articles 1

advertising articles 2

Advertise under the article