ಅಪ್ರಾಪ್ತೆಯ ಅಪಹರಣ ಮಾಡಿದಾತ ಸುಳಿವು ನೀಡಿದವರಿಗೆ 50 ಸಾವಿರ ರೂ.: ಶಿವಮೊಗ್ಗ ಮಹಿಳಾ ಠಾಣೆ ಘೋಷಣೆ
Wednesday, July 13, 2022
ಶಿವಮೊಗ್ಗ: ಅಪ್ರಾಪ್ತ ಬಾಲಕಿಯ ಅಪಹರಣ ಮಾಡಿದವನ ಸುಳಿವು ನೀಡಿದವರಿಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ 50 ಸಾವಿರ ರೂ. ಬಹುಮಾನ ನೀಡಲಾಗುತ್ತದೆ ಎಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ಘೋಷಿಸಿದೆ.
ಶಿವಮೊಗ್ಗದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಷಿತಾ(16) ಎಂಬ ಲಿಂಗರಾಜು(26) ಎಂಬಾತ ಅಪಹರಿಸಿದ್ದಾನೆ. ವಿರಾಟ್ ಹಾಗೂ ರಾಜು ಎಂದು ಕೆರೆಯಲ್ಪಡುವ ಈತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಪ್ರಕಟಿಸಿದ್ದಾರೆ. ಲಕ್ಷ್ಮೀನಾರಾಯಣ್ ಎಂಬವರ ಪುತ್ರ ಲಿಂಗರಾಜು ಶಂಕಿತ ಅಪಹರಣಕಾರನೆಂದು ಹೇಳಲಾಗಿದೆ. ಈತ ಬೆಂಗಳೂರಿನ ಕೆ.ಪಿ.ಅಗ್ರಹಾರದಲ್ಲಿ ವಾಸಿಸುವುದಾಗಿ ಬಾಲಕಿಯ ತಂದೆ ವಿನಯ್ ಕುಮಾರ್ ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ಬಾಲಕಿ ವರ್ಷಿತಾ ಹಾಗೂ ಅಪಹರಣಕಾರ ಲಿಂಗರಾಜು ಇರುವಿಕೆಯ ಬಗ್ಗೆ ಸುಳಿವು ಇದ್ದಲ್ಲಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ದೂರವಾಣಿ ಸಂಖ್ಯೆ: 9480803349 ಹಾಗೂ 9449584739 ಅಥವಾ ಶಿವಮೊಗ್ಗ ನಿಯಂತ್ರಣ ಕೊಠಡಿ - 08182-261413 ಮತ್ತು ಮೊಬೈಲ್ ಸಂಖ್ಯೆ - 9480803300 ಗೆ ಕರೆ ಮಾಡುವಂತೆ ತಿಳಿಸಲಾಗಿದೆ.