
ಹಳೆಯಂಗಡಿ: ಕಾರಿನಲ್ಲಿದ್ದ ದುಬಾರಿ ಬೆಳೆಯ ಮೊಬೈಲ್, ನಗದು ಕಳವು!
6/21/2022 09:22:00 AM
ಹಳೆಯಂಗಡಿ: ಇಲ್ಲಿನ ಪಂಡಿತ್ ಹರಿಭಟ್ ರಸ್ತೆಯ ನಿವಾಸಿ ಅನ್ವರ್ ಎಂಬವರು ಕಾರಿನಲ್ಲಿಟ್ಟಿದ್ದ ದುಬಾರಿ ಬೆಲೆಯ ಮೊಬೈಲ್ ಹಾಗೂ ನಗದು ಕಳವು ಆಗಿರುವ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನ್ವರ್ ಅವರು ತಮ್ಮ ಮನೆಯ ಹಿಂಭಾಗದಲ್ಲಿದ್ದ ಶೆಡ್ ನಲ್ಲಿ ಕಾರ್ ಅನ್ನು ಪಾರ್ಕ್ ಮಾಡಿದ್ದರು. ಆದರೆ ಅವರ ಬೆಲೆಬಾಳುವ ಮೊಬೈಲ್ ಮತ್ತು ಪರ್ಸ್‌ನಲ್ಲಿ 10 ಸಾವಿರ ರೂ. ಕಾರಿನೊಳಗಡೆ ಇಡಲಾಗಿತ್ತು. ಕಾರು ಬಾಗಿಲು ತೆಗೆದು ಹಳೆಯಂಗಡಿ ಇಂದಿರಾನಗರ ನಿವಾಸಿ ಶಂಸುದ್ದೀನ್ ಮೊಬೈಲ್ ಹಾಗೂ ಪರ್ಸ್ ನಲ್ಲಿದ್ದ 10 ಸಾವಿರ ರೂ. ಕಳವುಗೈದಿದ್ದಾನೆ.
ಈತನ ಕೈಚಳಕದ ಕೃತ್ಯ ಅನ್ವರ್ ಅವರ ಮನೆಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧಾರಿಸಿ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.