-->
ಮನಾಲಿ: ಹೊಟೇಲ್ ಗೆ ನುಗ್ಗಿ ಪತ್ನಿ - ಪ್ರಿಯಕರನನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮನಾಲಿ: ಹೊಟೇಲ್ ಗೆ ನುಗ್ಗಿ ಪತ್ನಿ - ಪ್ರಿಯಕರನನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮನಾಲಿ: ಪ್ರವಾಸಕ್ಕೆಂದು ಬಂದು ಮನಾಲಿಯ ಹೋಟೆಲ್​​ವೊಂದರಲ್ಲಿ ತಂಗಿದ್ದ ಪತ್ನಿ ಹಾಗೂ ಪ್ರಿಯಕರನ ಮೇಲೆ ಗುಂಡು ಹಾರಿಸಿರುವ ವ್ಯಕ್ತಿಯೋರ್ವನು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದಿದೆ.

ಪ್ರಿಯಕರನೊಂದಿಗೆ ಮನಾಲಿ ಪ್ರವಾಸಕ್ಕೆಂದು ಪತ್ನಿ ಬಂದಿರುವ ಬಗ್ಗೆ ಈ ವ್ಯಕ್ತಿಗೆ ಮಾಹಿತಿ ತಿಳಿದಿದೆ. ಆದ್ದರಿಂದ ದೆಹಲಿ ಮೂಲದ ಈತ ತನ್ನ ಗನ್​ ನೊಂದಿಗೆ ತಾನೂ ಮನಾಲಿ ಪ್ರವಾಸ ಕೈಗೊಂಡಿದ್ದಾನೆ. ಆ ಬಳಿಕ ಪತ್ನಿ ಹಾಗೂ ಆಕೆಯ ಪ್ರಿಯಕರ ಉಳಿದುಕೊಂಡಿರುವ ಹೋಟೆಲ್​ ಮಾಹಿತಿಯನ್ನು ಪಡೆದುಕೊಂಡಿದ್ದಾನೆ.

ಶುಕ್ರವಾರ ಬೆಳಗ್ಗೆಯೇ ಇಬ್ಬರು ಇರುವ ಕೊಠಡಿಗೆ ನುಗ್ಗಿದ ಈ ವ್ಯಕ್ತಿ ಏಕಾಏಕಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಆಕೆಯ ಪ್ರಿಯಕರ ಮೃತಪಟ್ಟಿದ್ದು, ಗಾಯಗೊಂಡಿರುವ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಗುಂಡು ಹಾರಿಸಿದ ವ್ಯಕ್ತಿಯೂ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಈ ಬಗ್ಗೆ ಎಲ್ಲಾ ರೀತಿಯಲ್ಲೂ ತನಿಖೆ ಕೈಗೊಳ್ಳಲಾಗುತ್ತಿದ್ದು, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಮನಾಲಿ ಡಿಎಸ್​ಸಿ ಹೇಮ್​​ ರಾಜ್​ ವರ್ಮಾ ತಿಳಿಸಿದ್ದಾರೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article