ಮಂಗಳೂರು: ಇತ್ತೀಚೆಗೆ ಇಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಂದಿದ್ದು, ಹೆಚ್ಚಿನವರು ಇದರತ್ತ ಒಲವು ತೋರಿಸುತ್ತಿದ್ದಾರೆ. ಆದರೆ ಹಲವೆಡೆ ಚಾರ್ಜ್ ಗೆ ಇಟ್ಟಲ್ಲೇ ಇಲೆಕ್ಟ್ರಿಕ್ ಸ್ಕೂಟರ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿರುವ ವಿಚಾರ ಸುದ್ದಿಯಾಗುತ್ತಿವೆ. ಇದೀಗ ನಗರದ ಬೋಂದೆಲ್ ನಲ್ಲಿ ಚಾರ್ಜ್ ಗೆ ಇಟ್ಟಿರುವ ಇಲೆಕ್ಟ್ರಿಕ್ ಸ್ಕೂಟರ್ ಸ್ಪೋಟಗೊಂಡು ಸುಟ್ಟುಕರಕಲಾದ ಘಟನೆ ಇಂದು ನಡೆದಿದೆ.
ನಗರದ ಬೋಂದೆಲ್ ಸಮೀಪದ ಕೆ.ಎಚ್.ಕಾಲನಿಯಲ್ಲಿನ ಮನೆಯೊಂದರಲ್ಲಿ ಚಾರ್ಜ್ ಗೆ ಇಟ್ಟಿರುವ ಇಲೆಕ್ಟ್ರಿಕ್ ಸ್ಕೂಟರ್ ಸ್ಪೋಟಗೊಂಡು ಬೆಂಕಿಗಾಹುತಿಯಾಗಿದೆ. ಪರಿಣಾಮ ಇಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಚಾರ್ಜ್ ಗೆ ಇಟ್ಟ ಕೆಲವೇ ಹೊತ್ತಿನಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಬೆಂಕಿ ಹತ್ತಿಕೊಂಡ ಪರಿಣಾಮ ಸ್ಕೂಟರ್ ನ ಹಿಂಬದಿಯ ಯಂತ್ರಗಳು ಸಂಪೂರ್ಣ ಸುಟ್ಟುಕರಕಲಾಗಿದೆ. ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.