-->

ಕುಂಬಳೆ: ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಗೂಸು ಮೃತ್ಯು

ಕುಂಬಳೆ: ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಗೂಸು ಮೃತ್ಯು

ಕುಂಬಳೆ: ಹಾಲುಣಿಸುತ್ತಿದ್ದಾಗ ಎದೆಹಾಲು ಗಂಟಲಿನಲ್ಲಿ ಸಿಲುಕಿ ಒಂದೂವರೆ ವರ್ಷದ ಹಸುಗೂಸೊಂದು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ ನಡೆದಿದೆ.

ಮಧೂರಿನಲ್ಲಿ ಬಾಡಿಗೆಗೆ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಅಪ್ತಾಬ್‌ ಎಂಬವರ ಪುತ್ರಿ ಇನಿಯ ಕಾರ್ತೋನ್‌ ಮೃತಪಟ್ಟ ಒಂದೂವರೆ ವರ್ಷದ ಮಗು.

ಈ ಮಗುವಿಗೆ ತಾಯಿ ಎದೆಹಾಲನ್ನು ಉಣಿಸುತ್ತಿದ್ದರು. ಈ ವೇಳೆ ಹಾಲು ಗಂಟಲಲ್ಲಿ ಸಿಲುಕಿ ಮಗು ಒದ್ದಾಡಿದೆ. ತತ್‌ಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article