
ಬೈಕ್ ಗೆ ಕಾರು ಢಿಕ್ಕಿ: 3ವರ್ಷದ ಹಸುಳೆ, 16ರ ಹರೆಯದ ಬಾಲಕಿ ಮೃತ್ಯು
6/23/2022 08:52:00 PM
ಬಾಗಲಕೋಟೆ: ಕಾರೊಂದು ಢಿಕ್ಕಿಯಾದ ಪರಿಣಾಮ ಬೈಕ್ ನಲ್ಲಿ ಸಂಚರಿಸುತ್ತಿದ್ದ ಮೂರು ವರ್ಷದ ಹಸುಳೆ ಹಾಗೂ 16ರ ಹರೆಯದ ಬಾಲಕಿ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಮಹಾವೀರ ಶಾಲೆಯ ಸಮೀಪ ನಡೆದಿದೆ.
ಭಾಗ್ಯಶ್ರೀ ಕಿದಾಪುರಾ(16), ತನುಶ್ರೀ(3) ದುರಂತದಲ್ಲಿ ಬಲಿಯಾದವರು.
ಇವರು ಸಂಚರಿಸುತ್ತಿದ್ದ ಬೈಕ್ ಗೆ ಹಿಂದಿನಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಜಮಖಂಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.