ಮಂಗಳೂರು: ಎಸ್ ಡಿಪಿಐ ಸಮಾವೇಶಕ್ಕೆ ಹೋಗುತ್ತಿದ್ದವರಿಂದ ಪೊಲೀಸ್ ನಿಂದನೆ; ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

ಮಂಗಳೂರು: ನಗರದ ಕಣ್ಣೂರಿನಲ್ಲಿ ಶುಕ್ರವಾರ ನಡೆದಿರುವ ಎಸ್ ಡಿಪಿಐ ಸಮಾವೇಶಕ್ಕೆ ತೆರಳುತ್ತಿದ್ದ ಯುವಕರ ತಂಡವೊಂದು ಮಾಡಿರುವ ಪೊಲೀಸ್ ನಿಂದನೆ ಆರೋಪ ಪ್ರಕರಣದಲ್ಲಿ ಮತ್ತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ‌. ಇದೀಗ ಬಂಧಿತರ ಸಂಖ್ಯೆ 12ಕ್ಕೆ ಏರಿದೆ.

ಗುರುಪುರ ನಿವಾಸಿ ಸಫ್ವಾನ್ ಯಾನೆ ಫಹಾದ್(23), ಅಬ್ದುಲ್ ಸಲಾಂ(23), ಮೊಹಮ್ಮದ್ ಸಾಹಿಲ್(23), ಮೊಹಮ್ಮದ್ ಫಲಾಹ್(20), ಸೂರಲ್ಪಾಡಿ ನಿವಾಸಿ ಮೊಹಮ್ಮದ್ ಹುನೈಜ್(23), ಇನ್ನೊಳಿ ನಿವಾಸಿ ಅಬ್ದುಲ್ ಲತೀಫ್( 31) ಬಂಧಿತ ಆರೋಪಿಗಳು. ಬಂಧಿತರಿಂದ  ಒಂದುಬಸ್ಕೂಟರ್ ಹಾಗೂ ಒಂದು ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಎಸ್ ಡಿಪಿಐ ಸಮಾವೇಶಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಎಸ್ ಡಿಪಿಐ ಕಾರ್ಯಕರ್ತರು ಅವಾಚ್ಯವಾಗಿ ಪೊಲೀಸರನ್ನು ನಿಂದಿಸಿದ್ದರು. ಈ ಹಿನ್ನೆಲೆಯಲ್ಲಿ ನಿಂದನೆ ಮಾಡಿರುವ ಇಬ್ಬರ ಸಹಿತ ಅವರಿಗೆ ಆಶ್ರಯ ನೀಡಿರುವ ನಾಲ್ವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಸಫ್ವಾನ್ ಯಾನೆ ಫಹಾದ್ ಪೊಲೀಸ್ ವಿರುದ್ಧ ಘೋಷಣೆ ಕೂಗುವುದನ್ನು ವೀಡಿಯೋ ಮಾಡಿ ವೈರಲ್ ಮಾಡಿದ್ದನು. ಈ ಬಗ್ಗೆ ಬಂಧಿತರ ಮೇಲೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu