-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕೆಜಿಎಫ್ ರಾಕಿ ಬಾಯ್ ಸ್ಟೈಲ್ ನಲ್ಲಿ  ಡೈಲಾಗ್ ಹೊಡೆದ ಎಸ್ ಡಿಪಿಐ ನಾಯಕ ರಿಯಾಜ್ ಫರಂಗಿಪೇಟೆಯಿಂದ ಆರ್ ಎಸ್ಎಸ್ ಗೆ ವಾರ್ನಿಂಗ್

ಕೆಜಿಎಫ್ ರಾಕಿ ಬಾಯ್ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದ ಎಸ್ ಡಿಪಿಐ ನಾಯಕ ರಿಯಾಜ್ ಫರಂಗಿಪೇಟೆಯಿಂದ ಆರ್ ಎಸ್ಎಸ್ ಗೆ ವಾರ್ನಿಂಗ್

ಮಂಗಳೂರು: ಕೆಜಿಎಫ್ ರಾಕಿ ಬಾಯ್ ಸ್ಟೈಲ್ ನಲ್ಲಿ 'ವೈಲೆನ್ಸ್.. ವೈಲೆನ್ಸ್... ವೈಲೆನ್ಸ್....' ಡೈಲಾಗ್ ಹೊಡೆದಿರುವ ಎಸ್ ಡಿಪಿಐ ಮುಖಂಡ ರಿಯಾಜ್ ಫರಂಗಿಪೇಟೆ ಆರ್ ಎಸ್ಎಸ್ ಗೆ ಡಿಫರೆಂಟ್ ಆಗಿ ಎಚ್ಚರಿಕೆ ನೀಡಿದ್ದಾರೆ. ಇದೀಗ ಇದರ ವೀಡಿಯೋ ವೈರಲ್ ಆಗಿ ಭಾರೀ ಸದ್ದು ಮಾಡುತ್ತಿದೆ‌.

ನಿನ್ನೆ ನಗರದ ಹೊರವಲಯದ ಕಣ್ಣೂರಿನಲ್ಲಿ ನಡೆದ ಎಸ್ ಡಿಪಿಐನ ಜನಾಧಿಕಾರ ಸಮಾವೇಶದಲ್ಲಿ ಮಾತನಾಡಿರುವ ರಿಯಾಜ್ ಫರಂಗಿಪೇಟೆ ರಾಕಿ ಬಾಯ್ ಸ್ಟೈಲ್ ನಲ್ಲಿಯೇ ಆರ್ ಎಸ್ಎಸ್ ಗೆ ವಾರ್ನಿಂಗ್ ನೀಡಿದ್ದಾರೆ‌‌. 'ವೈಲೆನ್ಸ್.. ವೈಲೆನ್ಸ್... ವೈಲೆನ್ಸ್.... ವಿ ಡೋಂಟ್ ಲೈಕ್ ಇಟ್. ವಿ ಅವಾಯ್ಡ್, ಬಟ್ ವೈಲೆನ್ಸ್ ಲೈಕ್ಸ್ ಅಸ್. ವಿ ಕಾಂಟ್ ಅವಾಯ್ಡ್' ಎಂದು ಎಚ್ಚರಿಕೆ ನೀಡಿದ್ದಾರೆ.




ಇದೀಗ ಈ ವೈಲೆನ್ಸ್ ಡೈಲಾಗ್ ವೀಡಿಯೋ ಭಾರೀ ವೈರಲ್ ಆಗುತ್ತಿದೆ. ಈ ಹಿಂದೆಯೂ ರಿಯಾಜ್ ಫರಂಗಿಪೇಟೆಯವರ 'ನೀ ತಾಂಟ್ರೆ.. ಬಾ ತಾಂಟ್' ಡೈಲಾಗ್ ಕೂಡಾ ಭಾರೀ ಟ್ರೋಲ್ ಗೆ ಒಳಗಾಗಿತ್ತು.

Ads on article

Advertise in articles 1

advertising articles 2

Advertise under the article

ಸುರ