
ಮುಸ್ಲಿಂ ಯುವತಿಯ ಕೈಹಿಡಿದ ಹಿಂದೂ ಯುವಕ- ರಾತ್ರಿ ಇಡೀ ನಡೆದ ಹೆತ್ತವರ ಮನವೊಲಿಕೆ ವಿಫಲ!
ಮುಸ್ಲಿಂ ಯುವತಿಯ ಕೈಹಿಡಿದ ಹಿಂದೂ ಯುವಕ- ರಾತ್ರಿ ಇಡೀ ನಡೆದ ಹೆತ್ತವರ ಮನವೊಲಿಕೆ ವಿಫಲ!
ತನ್ನನ್ನು ಗಾಢವಾಗಿ ಪ್ರೇಮಿಸಿದ ಮುಸ್ಲಿಂ ಯುವತಿಯ ಕೈಹಿಡಿದ ಪ್ರಸಂಗ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ.
ಈ ಪ್ರೇಮಿಗಳು ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದರು. ಇವರು ಹೆತ್ತವರ ವಿರೋಧದ ನಡುವೆ ಮದುವೆಯಾಗಿದ್ದರು ಎಂಬುದು ಬಿಸಿ ಬಿಸಿ ಸುದ್ದಿಯಾಗಿ ವಾಟ್ಸ್ಯಾಪ್‌ನಲ್ಲಿ ಹರಿದಾಡಿತು.
ಘಟನೆ ವಿವರ
ಕನಕಗಿರಿಯ ಹಿಂದೂ ಸಮಾಜದ ಯುವಕ ಕನಕ ರೆಡ್ಡಿ ಹಾಗೂ ಮುಸ್ಲಿಂ ಸಮುದಾಯದ ಯುವತಿ ದಿಲ್‌ಶಾದ್ ಕೆಲ ತಿಂಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಪ್ರೇಮಿಸುತ್ತಿದ್ದರು.
2022ರ ಮೇ 10ರಂದು ಈ ಯುವ ಪ್ರೇಮಿಗಳು ಸ್ಥಳೀಯ ದೇವಸ್ಥಾನವೊಂದರಲ್ಲಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಸ್ಥಳೀಯ ಯುವಕರ ವ್ಯಾಟ್ಸ್ಯಾಪ್ ಸ್ಟೇಟಸ್‌ಗಳ ಮೂಲಕ ಹರಿದಾಡುತ್ತಿತ್ತು.
ಈ ವಿಷಯ ತಿಳಿದ ಯುವತಿಯ ಪಾಲಕರು ಮತ್ತು ಮುಸ್ಲಿಂ ಸಮುದಾಯದ ಜನರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಿದರು. ಶನಿವಾರ ತಡರಾತ್ರಿ ಠಾಣೆಗೆ ಆಗಮಿಸಿದ ಯುವ ದಂಪತಿ ತಾವು ಮದುವೆಯಾಗಿರುವ ವಿಷಯ ತಿಲಿಸಿದರು. ಅವರು ಠಾಣೆಗೆ ಆಗಮಿಸಿದ ವಿಷಯ ತಿಳಿದ ಉಭಯ ಸಮಾಜದ ಕೆಲ ಯುವಕರು ಹಾಗೂ ಹಿರಿಯರು ಠಾಣೆ ಮುಂದೆ ಜಮಾಯಿಸಿದ್ದರು.
ಯುವತಿ ಪೋಷಕರ ಅಳಲು:
ಯುವತಿಯ ಅಂತಿಮ ನಿರ್ಧಾರಕ್ಕೆ ಕಾದು ಕುಳಿತ್ತಿದ್ದ ಪೊಲೀಸರು ಕೊನೆಯದಾಗಿ ಯುವತಿಯ ಮನವೊಲಿಸಲು ಪ್ರತ್ಯೇಕ ಕೊಠಡಿಯಲ್ಲಿ ಪೊಲೀಸರ ಸುರಕ್ಷತೆಯಲ್ಲಿ ಪಾಲಕರಿಗೆ ಕೆಲ ಗಂಟೆಗಳ ಕಾಲ ಮಾತನಾಡಲು ಅವಕಾಶ ನೀಡಿದರು.
ಹೆತ್ತವರು ಹಾಗೂ ಹಿರಿಯರು ಸಾಕಷ್ಟು ಸಮಯ ಚರ್ಚಿಸಿ, ಅತ್ತು ಕಣ್ಣೀರು ಸುರಿಸಿದರೂ ಯುವತಿ ಮಾತ್ರ ಪ್ರೀತಿಸಿದವನನ್ನೇ ವಿವಾಹವಾಗುವೆ ಎನ್ನುವ ಮಾತೇ ಆಡಿದಳು.
ಮಧ್ಯರಾತ್ರಿ 2 ಗಂಟೆವರೆಗೆ ಮಾತುಕತೆ ನಡೆಸಲಾಯಿತು. ಹಾಗೆಯೇ ಮಹಿಳಾ ಸಾಂತ್ವನ ಕೇಂದ್ರಕ್ಕೆ ಯುವಕ- ಯುವತಿಯನ್ನು ಕರೆದೊಯ್ಯಲಾಯಿತು. ರವಿವಾರ ಬೆಳಗ್ಗೆ ತೋಟವೊಂದರಲ್ಲಿ ಸ್ಥಳಾಂತರಿಸಲಾಯಿತು.
ಅಲ್ಲೂ ಉಭಯ ಸಮಾಜದ ಜನರು ಹೊರಟಾಗ ಅಲ್ಲಿಂದ ತಾವರಗೇರಾ ಪೊಲೀಸ್ ಠಾಣೆಗೆ ಕರೆದೊಯ್ದರು. ಕೊನೆಗೆ ಯುವತಿಯ ಜತೆ ಮಾತನಾಡಲು ಪಾಲಕರಿಗೆ ಅವಕಾಶ ನೀಡಲಾಯಿತು. ಆದರೆ, ಪಾಲಕರ ಅಂತಿಮ ಪ್ರಯತ್ನವೂ ವಿಫಲವಾಗಿ ಮದುಮಗಳು ಯುವಕನ ಜೊತೆ ಸಂಸಾರ ಆರಂಭಿಸಿದಳು.