ಪ್ರಿಯಕರನ ಸಾವಿನಿಂದ ಮನನೊಂದು ಪ್ರಿಯತಮೆ ವಿಷ ಸೇವಿಸಿ ಸಾವು: ಮದುವೆ ಆಗಬೇಕಾದವರು ಮಸಣ ಸೇರಿದರು

ತುಮಕೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಿಯಕರನ ಸಾವಿನಿಂದ ಮನೊಂದ ಪ್ರೇಯಸಿಯ ವಿಷ ಸೇವಿದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನ ಅರೆಹಳ್ಳಿಯಲ್ಲಿ ನಡೆದಿದೆ. ಈ ಮೂಲಕ ಮದುವೆಯಾಗಿ ದಾಂಪತ್ಯ ಜೀವನ ನಡೆಸಬೇಕಾದ ಜೋಡಿ ಮಸಣ ಸೇರುವಂತಾದದ್ದು ಮಾತ್ರ ಹೆತ್ತವರಿಗೆ ಅರಗಿಸಲಾಗದ ಘಟನೆಯಾಗಿದೆ.

ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ನಿವಾಸಿ ಧನುಷ್(23), ಸುಷ್ಮಾ(22) ಮೃತಪಟ್ಟ ದುರ್ದೈವಿಗಳು. ಧನುಷ್ ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಸುಷ್ಮಾ ಎಂಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಮೇ 11ರಂದು ಊರಿನ ಜಾತ್ರೆಗೆಂದು ಬಂದಿದ್ದ ಧನುಷ್ ನೆಲಮಂಗಲ ಕುಲಾನಹಳ್ಳಿ ಬಳಿ ನಡೆದಿರುವ ಅಪಘಾತದಲ್ಲಿ ಮೃತಪಟ್ಟಿದ್ದರು.

ಪ್ರಿಯಕರನ ಸಾವಿನಿಂದ ಸುಷ್ಮಾ ಭಾರೀ ಆಘಾತಕ್ಕೊಳಗಾಗಿದ್ದರು. ಅಂದಿನಿಂದ ಅವರು ಧನುಷ್ ಸಾವಿನ‌ ನೋವಿನಲ್ಲಿಯೇ ಇದ್ದರು. ಪರಿಣಾಮ ಸುಷ್ಮಾ ವಿಷಪ್ರಾಷಣ ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೇ 14ರಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.