-->
ವಿವಾಹಕ್ಕೆ ಕೆಲವೇ ಕ್ಷಣಗಳು ಬಾಕಿಯಿರುವಾಗಲೇ ವರ ಅತ್ಯಾಚಾರ ಪ್ರಕರಣದಲ್ಲಿ ಅಂದರ್

ವಿವಾಹಕ್ಕೆ ಕೆಲವೇ ಕ್ಷಣಗಳು ಬಾಕಿಯಿರುವಾಗಲೇ ವರ ಅತ್ಯಾಚಾರ ಪ್ರಕರಣದಲ್ಲಿ ಅಂದರ್

ಜಬಲ್ಪುರ್(ಮಧ್ಯಪ್ರದೇಶ): ವಿವಾಹವಾಗಲು ಇನ್ನೇನು ಕೆಲವೇ ಕ್ಷಣಗಳು ಬಾಕಿಯಿರುವಾಗಲೇ ಪೊಲೀಸರು ಅತ್ಯಾಚಾರ ಆರೋಪದಲ್ಲಿ ವರನನ್ನೇ ಬಂಧಿಸಿ ಕರೆದೊಯ್ದಿರುವ ಘಟನೆ ಮಧ್ಯಪ್ರದೇಶದ ಕಟ್ನಿ ಎಂಬಲ್ಲಿ ನಡೆದಿದೆ.

ತಾಳಿ ಕಟ್ಟುವುದಕ್ಕೆ ಮೊದಲು ಮೆರವಣಿಗೆ ಹೊರಡಲೆಂದು ವರ ತಯಾರಾಗುತ್ತಿದ್ದ. ಈ ಸಂದರ್ಭ ಅತ್ಯಾಚಾರ ಆರೋಪದ ಮೇಲೆ ಜಬಲ್ಪುರ್​ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿರುವ ಈತ ತನ್ನ ಸ್ನೇಹಿತೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದೆ. ಮದುವೆಯಾಗುವುದಾಗಿ ನಂಬಿಸಿರುವ ಈತ ತನ್ನನ್ನು ಹೋಟೆಲ್​ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆಂದು ಯುವತಿ ದೂರು ನೀಡಿದ್ದಳು. ಬಗ್ಗೆ ಜಬಲ್ಪುರ್​​ ಲಾರ್ಡ್​ಗಂಜ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ಪ್ರಫುಲ್ ಶ್ರೀ ವಾಸ್ತವ್ ಮಾತನಾಡಿ, ಅನುಜ್ ದುಬೆ ತನ್ನ ಸ್ನೇಹಿತೆಯ ಮೇಲೆ ಕಳೆದ ಕೆಲ ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದ ಎಂದು ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಅಲ್ಲದೆ ಆಕೆಯೊಂದಿಗೆ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದನಂತೆ. ಇದೀಗ ಬೇರೆ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳಲು ಅನುಜ್ ದುಬೆ ಮುಂದಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಯುವತಿ ದೂರು ದಾಖಲಿಸಿದ್ದಾಳೆ.

ಎಪ್ರಿಲ್ 15ರಂದು ಅನುಜ್ ದುಬೆ ಬೇರೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ನಾನು ಸ್ಥಳಕ್ಕೆ ತೆರಳಿ, ಆತನ ಬಂಧನ ಮಾಡಿದ್ದು, ವಿಚಾರಣೆ ನಡೆಸಲಿದ್ದೇವೆ ಎಂದಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100