-->

ಮನೆಗೆ ಬಂದಿದ್ದ ಸ್ನೇಹಿತೆಗೆ ತಂಪು‌ಪಾನೀಯದಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರಸಿ ಆತ ಮಾಡಿದ್ದೇನು ಗೊತ್ತೇ?

ಮನೆಗೆ ಬಂದಿದ್ದ ಸ್ನೇಹಿತೆಗೆ ತಂಪು‌ಪಾನೀಯದಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರಸಿ ಆತ ಮಾಡಿದ್ದೇನು ಗೊತ್ತೇ?

ಪ್ರಕಾಶಂ: ಸಹಪಾಠಿಯನ್ನು ಮನೆಗೆ ಕರೆಸಿಕೊಂಡ ವಿದ್ಯಾರ್ಥಿಯೋರ್ವನು  ಪ್ರಜ್ಞೆ ತಪ್ಪುವ ಔಷಧಿ ಬೆರೆಸಿರುವ ತಂಪು ಪಾನೀಯ ನೀಡಿ ಮೂರ್ಛೆ ಹೋದ ಬಳಿಕ ಆಕೆಯ ನಗ್ನ ಫೋಟೊಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವ ಘಟನೆ ಪೆದ್ದದೊರ್ನಾಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೂದೆಕುಲ ನಾಗೂರ್​ ಮೀರಾವಲಿ ಎಂಬಾತ ಡಿಪ್ಲೋಮಾ ವಿದ್ಯಾರ್ಥಿಯಾದ್ದಾನೆ. ಈತನ ಸಹಪಾಠಿಯೋರ್ವಳು ಸ್ನೇಹಿತೆಯ ಹುಟ್ಟುಹಬ್ಬಕ್ಕೆಂದು ಯುವಕನ ಗ್ರಾಮಕ್ಕೆ ಬಂದಿದ್ದಾಳೆ. ಇಬ್ಬರಿಗೂ ಪರಿಚಯ ಇದ್ದಿರುವುರಿಂದ ಆರೋಪಿತ ಯುವಕ ಮೀರಾವಲಿ ಆಕೆಯನ್ನು ತನ್ನ ಮನೆಗೆ ಆಹ್ವಾನಿಸಿದ್ದಾನೆ. ಅದರಂತೆ ಆಕೆ ಆತನೆ ಮನೆಗೆ ಹೋಗಿದ್ದಾಳೆ. ಈ ವೇಳೆ ಯುವತಿಗೆ ಮೀರಾವಲಿ ಪ್ರಜ್ಞೆ ತಪ್ಪುವ ಔಷಧಿ ಕಲಸಿರುವ ತಂಪು ಪಾನೀಯ​ ನೀಡಿದ್ದಾನೆ. ಅದರಂತೆ ಯುವತಿ ಅದನ್ನು ಸೇವಿಸಿದ ಕೆಲವೇ ಕ್ಷಣದಲ್ಲಿ ಮೂರ್ಛೆಗೆ ಹೋಗಿದ್ದಾಳೆ.

ಈ ವೇಳೆ ಆರೋಪಿ ಮೀರಾವಲಿ ತನ್ನ ಸ್ನೇಹಿತ ರಸೂಲ್​ ಎಂಬಾತನನ್ನು ಕರೆಸಿದ್ದಾನೆ. ಇಬ್ಬರೂ ಸೇರಿ ವಿದ್ಯಾರ್ಥಿನಿಯ ನಗ್ನ ಚಿತ್ರಗಳನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಮೀರಾವಲಿ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.

ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದು ಯುವತಿ ಕುಟುಂಬಸ್ಥರಿಗೆ ಗೊತ್ತಾಗಿದೆ. ತಕ್ಷಣ ಮನೆಯವರು ಪೆದ್ದದೊರ್ನಾಲ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿರುವ ಯುವತಿಯ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಬಳಿಕ ಆ ಇಬ್ಬರು ಯುವಕರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಪೆದ್ದದೊರ್ನಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article