ಪೆಟ್ರೋಲ್ ಬೆಲೆ ದಾಖಲೆ ಏರಿಕೆ: ಜನತೆ ಕಂಗಾಲು
ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಎರಡು ವಾರಗಳಿಂದ ಸತತವಾಗಿ ಏರಿಕೆ ಕಂಡಿದೆ. ಇಂದು 90 ಏರಿಕೆಯಾಗಿದ್ದು ಕಳೆದ ಎರಡು ವಾರಗಳಲ್ಲಿ ಒಟ್ಟಾರೆ ತೈಲಬೆಲೆ ಏರಿಕೆ 11 ರೂಪಾಯಿಗಳಷ್ಟು ಏರಿಕೆ ಆಗಿದೆ.
ನವದೆಹಲಿಯಲ್ಲಿ ಪೆಟ್ರೋಲ್ ದರ 114.10 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲಿಗೆ ರೂ. 110.25 ಆಗಿದೆ.
ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಪೆಟ್ರೋಲ್ ದರ 122.67 ರೂಪಾಯಿ ದಾಖಲಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಿರಂತರ ಏರಿಕೆಯಿಂದ ಜನಜೀವನ ದುಸ್ತರವಾಗಿದೆ.
ಆರ್ಥಿಕವಾಗಿ ಜನರು ಕಂಗಾಲಾಗಿದ್ದಾರೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ.
ಅಡುಗೆ ಅನಿಲ, ಸಕ್ಕರೆ, ಖಾದ್ಯ ತೈಲ ಸೇರಿದಂತೆ ದಿನಬಳಕೆಯ ಸಾಮಾನುಗಳಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.
ಈಗಾಗಲೇ ಲಾಕ್‌ಡೌನ್, ಕೋರೋನಾ ಸಂಕಷ್ಟದಿಂದ ಪಾತಾಳಕ್ಕೆ ಕುಸಿದಿರುವ ಜನರ ಆರ್ಥಿಕತೆ ಬೆಲೆ ಏರಿಕೆಯಿಂದ ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ
ರಾಜ್ಯ ಸರಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ತಕ್ಷಣದಿಂದ ಜಾರಿ ಮಾಡುವಂತೆ ಹೆಚ್ಚಳ ಮಾಡಿದೆ.
ಶೇಕಡ 25 ರಷ್ಟು ತುಟ್ಟಿಭತ್ಯೆ ಮಾಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಸರಕಾರಕ್ಕೆ ವಾರ್ಷಿಕ 4759 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. 2021 ರ ಅಕ್ಟೋಬರ್ ನಲ್ಲಿ ತುಟ್ಟಿಭತ್ಯೆಯನ್ನು ಶೇಕಡ ಮೂರರಷ್ಟು, ಅಂದರೆ 21.5ರಿಂದ 24.5ಕ್ಕೆ ಹೆಚ್ಚಿಸಲಾಗಿತ್ತು.
ಸರಕಾರದ ಈಗಿನ ಕ್ರಮದಿಂದ ಸುಮಾರು 6 ಲಕ್ಷ ಸರಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಹಾಗೂ ನಿಗಮ ಮಂಡಳಿಗಳ 3 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.