-->
ದೇವಸ್ಥಾನದ ಬಳಿ ನಿಲ್ಲಿಸಿದ್ದ ರಾಯಲ್​ ಎನ್​ಫೀಲ್ಡ್​​ ಬೈಕ್‌  ಹಠಾತ್ ಬೆಂಕಿಗಾಹುತಿ: ಭಾರೀ ಶಬ್ದದ ಸ್ಫೋಟಕ್ಕೆ ಭಯಭೀತಿಗೊಳಗಾದ ಜನತೆ

ದೇವಸ್ಥಾನದ ಬಳಿ ನಿಲ್ಲಿಸಿದ್ದ ರಾಯಲ್​ ಎನ್​ಫೀಲ್ಡ್​​ ಬೈಕ್‌ ಹಠಾತ್ ಬೆಂಕಿಗಾಹುತಿ: ಭಾರೀ ಶಬ್ದದ ಸ್ಫೋಟಕ್ಕೆ ಭಯಭೀತಿಗೊಳಗಾದ ಜನತೆ

ಅನಂತಪುರ(ಆಂಧ್ರಪ್ರದೇಶ): ರಾಯಲ್​ ಎನ್​ಫೀಲ್ಡ್​​ ಬೈಕ್‌ ಒಂದು  ಹಠಾತ್ ಆಗಿ ಭಾರೀ ಶಬ್ದದೊಂದಿಗೆ ಸ್ಪೋಟಗೊಂಡು ಬೆಂಕಿಗಾಹುತಿಯಾದ ಭಯಾನಕ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ.

ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿದ್ದ ಈ ಬೈಕ್ ಹಠಾತ್ ಆಗಿ ಸ್ಪೋಟಗೊಂಡು ಬೆಂಕಿಗಾಹುತಿಯಾಗಿದೆ. ಪರಿಣಾಮ ಅಲ್ಲದ್ದ ಜನರು ಬೆಚ್ಚಿ ಬಿದ್ದಿದ್ದಾರೆ.
ಅನಂತಪುರದ ಗುಂತಕಲ್​ ವಲಯದ ಕಸಪುರಂ ನೆಟ್ಟಿಕಂಟಿಯ ಪ್ರಸಿದ್ಧ ಅಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಈ ಘಟನೆ ನಡೆದಿದೆ. ಈ ರಾಯಲ್​ ಎನ್​ಫೀಲ್ಡ್ ಬೈಕ್ ರವಿಚಂದ್ರ ಎಂಬುವರಿಗೆ ಸೇರಿದ್ದಾಗಿತ್ತು. ಜಾತ್ರೆ ಹಾಗೂ ಯುಗಾದಿ ಹಬ್ಬದ ನಿಮಿತ್ತ ಅವರು ಮೈಸೂರಿನಿಂದ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ.

ದೇವಸ್ಥಾನದ ಬಳಿ ನಿಲ್ಲಿಸಿದ್ದ ಅವರ ಬುಲೆಟ್​​ ಬೈಕ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೈಕ್ ಧಗಧಗನೇ ಹೊತ್ತಿ ಉರಿದಿದೆ. ಬಳಿಕ ಎಲ್ಲರೂ ನೋಡನೋಡುತ್ತಿದ್ದಂತೆ ಸ್ಫೋಟಗೊಂಡಿದೆ.

ಇದರಿಂದ ಸುತ್ತ-ಮುತ್ತಲಿದ್ದ ಜನರು ಭೀತಿಗೊಳಗಾಗಿದ್ದಾರೆ. ಅಲ್ಲದೇ, ಓರ್ವ ಮಹಿಳೆಗೆ ಬೆಂಕಿಯ ಕಿಡಿ ಬಿದ್ದು ಕಾಲಿಗೆ ಸಣ್ಣ ಗಾಯವಾಗಿದೆ. ಬೈಕ್​ ನಿಲ್ಲಿಸಿದ್ದ ಸ್ಥಳದ ಸುತ್ತಲು ಬೇರೆ ಬೈಕ್​ಗಳು ಮತ್ತು ಸಣ್ಣ-ಪುಟ್ಟು ಅಂಗಡಿಗಳು ಇದ್ದವು. ಆದ್ದರಿಂದ ತಕ್ಷಣ ಪೊಲೀಸರು ಮತ್ತು ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಬುಲೆಟ್​​ಗೆ ಬೆಂಕಿ ಹೊತ್ತಿಕೊಂಡ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100