ಸಿಡಿಲು ಬಡಿತಕ್ಕೆ ಯುವಕರಿಬ್ಬರು ಬಲಿ!

ಚನ್ನರಾಯಪಟ್ಟಣ: ಸಿಡಿಲು ಬಡಿತಕ್ಕೆ ಯುವಕರಿಬ್ಬರು ಬಲಿಯಾದ  ಘಟನೆ ಚೆನ್ನರಾಯಪಟ್ಟಣ ತಾಲೂಕಿನ ಬಸವನಪುರ ಗ್ರಾಮದ ಬಳಿ ಸಂಭವಿಸಿದೆ.

ಬಸವನಪುರ ಗ್ರಾಮ ನಿವಾಸಿ ಉದಯ್ ಕುಮಾರ್(24) ಹಾಗೂ ಸೂಸಲಗೆರೆ ಗ್ರಾಮ ನಿವಾಸಿ ದರ್ಶನ್(19) ಮೃತಪಟ್ಟ ಯುವಕರು.  

ನಿನ್ನೆ ಭಾರೀ ಗುಡುಗು ಸಹಿತ ಗಾಳಿ ಮಳೆ ಸುರಿದಿತ್ತು. ಈ ಹಿನ್ನೆಲೆಯಲ್ಲಿ ಉದಯ್ ಕುಮಾರ್ ಹಾಗೂ ದರ್ಶಬ್ ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಹೋಬಳಿಯ ಬಸವನಪುರ ಗೇಟ್‌ ಬಳಿ ಬಸ್ ತಂಗುದಾಣವೊಂದರಲ್ಲಿ  ನಿಂತಿದ್ದರು. ಆಗ ಏಕಾಏಕಿ ಇವರು ನಿಂತಿದ್ದ ಸ್ಥಳಕ್ಕೆ ಸಿಡಿಲು ಬಡಿದಿದೆ. ಪರಿಣಾಮ ಯುವಕರಿಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.      
BREAKING NEWS
Loading latest news...
Join our WhatsApp Channel Powered By : Online Pudu