ಉಳ್ಳಾಲ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚೂರಿ ಇರಿತ

ಉಳ್ಳಾಲ: ಕ್ಷುಲ್ಲಕ ಕಾರಣಕ್ಕೆ  ಯುವಕನೋರ್ವನಿಗೆ ಟ್ಯಾಂಕರ್ ಚಾಲಕನೋರ್ವನು ಚೂರಿಯಿಂದ ಇರಿದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂಗಡಿ ಬಳಿ ನಡೆದಿದೆ. 

ಬಬ್ಬಕಟ್ಟ ಎಂಬಲ್ಲಿನ ನಿವಾಸಿ ರಿಝ್ವಾನ್ (24) ಚೂರಿ ಇರಿತಕ್ಕೊಳಗಾದವನು. ಬಸ್ತಿಪಡ್ಪು ನಿವಾಸಿ ಖಲೀಲ್ ಚೂರಿಯಿಂದ ಇರಿದ ಟ್ಯಾಂಕರ್ ಚಾಲಕ. 

ಟ್ಯಾಂಕರ್ ಚಾಲಕ ಖಲೀಲ್ ಎಂಬಾತ ರಿಝ್ವಾನ್ ಮನೆಗೆ ನೀರು ಸರಬರಾಜು ಮಾಡದೇ ಹೋಗಿದ್ದ. ಈ ಬಗ್ಗೆ ಖಲೀಲ್ ಬಳಿ ರಿಝ್ವಾನ್ ತಾಯಿ ವಿಚಾರಣೆ ಮಾಡಿದ್ದಾರೆ. ಆದರೆ ಖಲೀಲ್ ಅವರನ್ನು ನಿಂದಿಸಿದ್ದ ಎನ್ನಲಾಗಿದೆ. ಇದೇ ವಿಚಾರದ ಹಿನ್ನೆಲೆಯಲ್ಲಿ ರಿಝ್ವಾನ್ ಮೇಲಂಗಡಿ ಸಮೀಪ ಖಲೀಲ್ ನನ್ನು ವಿಚಾರಿಸಿದ್ದಾರೆ. ಈ ಸಂದರ್ಭ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಟ್ಯಾಂಕರ್ ಚಾಲಕ ಖಲೀಲ್,  ರಿಝ್ವಾನ್‌ ನನ್ನು ಚೂರಿಯಿಂದ ಇರಿದಿದ್ದಾನೆ ಎಂದು ದೂರಲಾಗಿದೆ. 

ಗಾಯಗೊಂಡ ರಿಝ್ವಾನ್‌ ರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu