ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಹಾಗೂ ಜಗದೀಶ್ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಅಮೂಲ್ಯ ಅವಳಿ ಪುತ್ರರಿಗೆ ಜನ್ಮ ನೀಡಿದ್ದು, ಅಮೂಲ್ಯ ಹಾಗೂ ಜಗದೀಶ್ ದಂಪತಿ ತಂದೆ - ತಾಯಿಯಾದ ಸಂತಸದಲ್ಲಿದ್ದಾರೆ.

ಅಮೂಲ್ಯ ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಬಳಿಕ ಚೆಲುವಿನ ಚಿತ್ತಾರ ಸಿನಿಮಾದ ನಾಯಕಿಯಾಗಿ ಭಾರಿ ಯಶಸ್ಸು ಗಳಿಸಿದ್ದರು‌‌. ಅಲ್ಲದೆ ಈ ಸಿನಿಮಾ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಉತ್ತುಂಗದ ಮಟ್ಟದಲ್ಲಿ ಇರುವಾಗಲೇ ಅಮೂಲ್ಯ ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜೊತೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಡುತ್ತಾರೆ. ಇದೀಗ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಅಮೂಲ್ಯ ಹೆರಿಗೆಯಾಗಿದ್ದು, ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಇಂದು 11.45ಕ್ಕೆ ಅವರಿಗೆ ಹೆರಿಗೆಯಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಅಮೂಲ್ಯ ಸಹೋದರ ದೀಪಕ್ ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu