ಧಾರವಾಡ: ಪತ್ನಿಯನ್ನು ಹತ್ಯೆಗೈದ ಪತಿಯೋರ್ವನು ಕೊನೆಗೆ ತಾನೂ ನೇಣಿಗೆ ಶರಣಾದ ಘಟನೆ ಧಾರವಾಡದಲ್ಲಿ ನಡೆದಿದೆ.
ದಾರವಾಢದ ಗಣೇಶ ನಗರದಲ್ಲಿ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದೆ. ಪ್ರಕರಣದ ಬಗ್ಗೆ ತಿಳಿಯುತ್ತಿದ್ದಂತೆ ಧಾರವಾಡದ ಜನತೆ ಬೆಚ್ಚಿ ಬಿದ್ದಿದ್ದಾರೆ. ಗಣೇಶ ನಗರದ ಗೌಳಿ ಜನಾಂಗದ ಮನಿಷಾ ಹಾಗೂ ಶೆಟ್ಟು ಎಂಬ ದಂಪತಿಯೇ ಸಾವಿಗೀಡಾದವರು. ಮೊದಲು ಪತ್ನಿ ಮನಿಷಾಳನ್ನು ಹತ್ಯೆ ಮಾಡಿದ ಶೆಟ್ಟು ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಕೌಟುಂಬಿಕ ಕಲಹವೇ ಈ ದುರ್ಘಟನೆಗೆ ಕಾರಣ ಇರಬಹುದು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.