-->
OP - Pixel Banner ad
Youth achiever felicitated- ಯುವ ಕೃಷಿಕನಿಗೆ ಗೌರವ ಡಾಕ್ಟರೇಟ್: ರೈತ ಸಂಘ, ಕೆನರಾ ಬ್ಯಾಂಕ್ ಸನ್ಮಾನ

Youth achiever felicitated- ಯುವ ಕೃಷಿಕನಿಗೆ ಗೌರವ ಡಾಕ್ಟರೇಟ್: ರೈತ ಸಂಘ, ಕೆನರಾ ಬ್ಯಾಂಕ್ ಸನ್ಮಾನ

ಯುವ ಕೃಷಿಕನಿಗೆ ಗೌರವ ಡಾಕ್ಟರೇಟ್: ರೈತ ಸಂಘ, ಕೆನರಾ ಬ್ಯಾಂಕ್ ಸನ್ಮಾನ


ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಮೂಡಬಿದಿರೆಯಯ ಯುವ ಪ್ರಗತಿಪರ ಕೃಷಿಕ ಶ್ರೀ ಅಂಬೂರಿ ನಾಗರಾಜ್ ಶೆಟ್ಟಿ ಅವರನ್ನು ಮೂಡಬಿದಿರೆಯಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.ರೈತ ಸಂಘ ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಿತ ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ ಮಂಗಳೂರು ಇದರ ಸಹಭಾಗಿತ್ವದಲ್ಲಿ ನಡೆದ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮದಲ್ಲಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮ ಮೂಡುಬಿದಿರೆ ಹಂಡೇಲು ಗುತ್ತು ಧನಕೀರ್ತಿ ಬಲಿಪ ಅವರ ಮನೆಯಲ್ಲಿ ಜರಗಿತು.ಆರ್ಥಿಕ ಸಾಕ್ಷರತಾ ಸಮಾಲೋಚಕ ಶ್ರೀ ಲತೇಶ್.ಬಿ ಭಾರತ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಜೀವನ್ ಜ್ಯೋತಿ ವಿಮಾ ಯೋಜನೆ, ಎ.ಪಿ.ವೈ , ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ , ವಿವಿಧ ಡಿಜಿಟಲ್ ಬ್ಯಾಂಕ್ ಪಾವತಿ ವಿಧಾನ, ಸುರಕ್ಷಿತ ಡಿಜಿಟಲ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಬೂರಿ ನಾಗರಾಜ್ ಶೆಟ್ಟಿ, ತಮ್ಮ ಕಷ್ಟದ ದಿನಗಳು ಅದರಿಂದ ಹೊರಬರಲು ಪಟ್ಟಶ್ರಮವನ್ನು ನೆನಪು ಮಾಡಿಕೊಂಡರು. ಹಾಗೂ ತಮ್ಮನ್ನು ಸನ್ಮಾನಿಸಿದ ರೈತ ಸಂಘ ಹಾಗೂ ಕೆನರಾ ಬ್ಯಾಂಕಿಗೆ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ಹಿಸಿದ್ದ ರಾಜವರ್ಮ ಬೈಲಂಗಂಡಿ, ಇಂತಹ ಮಾಹಿತಿ ಕಾರ್ಯಕ್ರಮ ಜನರಿಗೆ ಸಹಕಾರಿ ಎಂದು ಹೇಳಿದರು. ಅದೇ ರೀತಿ ಸನ್ಮಾನಿತ ಯುವ ಕೃಷಿಕನ ಸಾಧನೆ ಅದಕ್ಕೆ ಲಭಿಸಿರುವ ಗೌರವ ಡಾಕ್ಟರೇಟ್ ಪದವಿ ಇಡೀ ಯುವ ರೈತಾಪಿ ವರ್ಗಕ್ಕೆ ಸಿಕ್ಕ ಪ್ರೋತ್ಸಾಹ ಎಂದು ಅಭಿಪ್ರಾಯಪಟ್ಟರು.ರಾಜ್ಯ ರೈತ ಸಂಘ ಕಾರ್ಯದರ್ಶಿ ಶ್ರೀ ಮನೋಹರ ಶೆಟ್ಟಿ ನಡುಕಂಬಳ ಗುತ್ತು ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಮೂಡಬಿದಿರೆಯಯ ಯುವ ಪ್ರಗತಿಪರ ಕೃಷಿಕ ಶ್ರೀ ಅಂಬೂರಿ ನಾಗರಾಜ್ ಶೆಟ್ಟಿ ಅವರಿಗೆ ಶುಭ ಹಾರೈಸಿದರು.ಹಂಡೇಲು ಗುತ್ತು ಶ್ರೀ ಧನಕೀರ್ತಿ ಬಲಿಪ ಸ್ವಾಗತಿಸಿದರು, ರೈತ ಸಂಘಜಿಲ್ಲಾ ಸಂಚಾಲಕರಾದ ಶ್ರೀ ದಯಾನಂದ ಶೆಟ್ಟಿ ಕಳವೂರ ಗುತ್ತು ಧನ್ಯವಾದ ಸಮರ್ಪಿಸಿದರು.

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242