ಸುಳ್ಯ: ಟೂತ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿರುವ ಪಿಯುಸಿ ವಿದ್ಯಾರ್ಥಿನಿ ಸಾವು!

ಸುಳ್ಯ: ಟೂತ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿರುವ ಪಿಯುಸಿ ವಿದ್ಯಾರ್ಥಿನಿ ತೀವ್ರ ಅಸ್ವಸ್ಥಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮ ನಿವಾಸಿ ಬೇರಿಕೆ ರಮೇಶ ಎಂಬುವರ ಪುತ್ರಿ ಶ್ರಾವ್ಯಾ (17) ಮೃತಪಟ್ಟ ವಿದ್ಯಾರ್ಥಿನಿ. 

ಶ್ರಾವ್ಯಾ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ವಾರದ ಹಿಂದೆ ಶಾಲೆಗೆ ರಜೆಯಿದ್ದ ಕಾರಣ ಮರ್ಕಂಜದಲ್ಲಿನ ತನ್ನ ಮನೆಗೆ ಬಂದಿದ್ದಳು. ಮನೆಯ ಬಾತ್ ರೂಮಿನ ಕಿಟಕಿಯಲ್ಲಿದ್ದ ಇಲಿ ಪಾಷಾಣವನ್ನು ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಹಲ್ಲುಜ್ಜಿದ್ದಾಳೆ. ಆದರೆ, ಕೆಲ ಕ್ಷಣದಲ್ಲೇ ತಾನು ಹಾಕಿರುವುದು ಪೇಸ್ಟ್​ ಅಲ್ಲ ಬೇರೇನೋ ಎಂದು ಆಕೆಗೆ ಅರಿವಾಗಿದೆ.

ತಕ್ಷಣ ಬಾಯಿಗೆ ನೀರು ಹಾಕಿಕೊಂಡು ಸ್ವಚ್ಛ ಮಾಡಿಕೊಂಡಿದ್ದಾಳೆ. ಬಾತ್​​ ರೂಮಿನಲ್ಲಿ ಸ್ವಲ್ಪ ಕತ್ತಲಿದ್ದಿದ್ದರಿಂದ ಶ್ರಾವ್ಯ, ಇಲಿ ಪಾಷಾಣವನ್ನೇ ತಪ್ಪಾಗಿ ಕೈಗೆತ್ತಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಬಳಿಕ ಪೋಷಕರು ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶ್ರಾವ್ಯ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu