Kadri Park turns mosquito breeding center- ಸ್ಮಾರ್ಟ್ ಸಿಟಿಯ ಮುಕುಟಕ್ಕೆ ಕಿರೀಟ: ಸೊಳ್ಳೆ ಉತ್ಪಾದನಾ ಕೇಂದ್ರವಾದ ಕದ್ರಿ ಪಾರ್ಕ್

ಸ್ಮಾರ್ಟ್ ಸಿಟಿಯ ಮುಕುಟಕ್ಕೆ ಕಿರೀಟ: ಸೊಳ್ಳೆ ಉತ್ಪಾದನಾ ಕೇಂದ್ರವಾದ ಕದ್ರಿ ಪಾರ್ಕ್




ಮಂಗಳೂರಿನ ಕದ್ರಿ ಪಾರ್ಕ್ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಇಲ್ಲಿ ಬರುವ ಎಲ್ಲ ಪ್ರವಾಸಿಗರಿಗೆ ಮಲೇರಿಯಾ, ಡೆಂಗ್ಯೂ ಉಚಿತವಾಗಿ ಹಂಚಲಾಗುತ್ತದೆ.



ಹೌದಾ... ಎಂದು ಹುಬ್ಬೇರಿಸಬೇಡಿ. ಪಾರ್ಕಿನ ಮಧ್ಯದಲ್ಲಿ ಇರುವ ಕಾರಂಜಿಯಲ್ಲಿ ನೀರು ಶೇಖರಣೆ ಮಾಡಲಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಇದೊಂದು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಪರಿವರ್ತಿತವಾಗಿದೆ.



ಕಳೆದ ಹಲವು ದಶಕಗಳಿಂದ ಇಲ್ಲಿಂದ ಚುನಾಯಿತರಾದ ಎಲ್ಲ ಶಾಸಕರೂ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಕೋಟ್ಯಂತರ ರೂಪಾಯಿ ಹಣ ವ್ಯಯಿಸಿದ್ದಾರೆ. ಮಕ್ಕಳ ಪಾರ್ಕ್, ಪುಟಾಣಿ ರೈಲು, ವಾಕರ್ಸ್ ಪಾಥ್, ಗೇಟ್, ಪ್ರವೇಶ ದ್ವಾರ ಹೀಗೆ ಎಲ್ಲ ಸಾಧ್ಯವಿದೆಯೋ ಅಲ್ಲಿ ಹಣ ವ್ಯಯಿಸಿದ್ದಾರೆ (ದೋಚಿದ್ದಾರೆ).



ಈ ಮಹಾನ್ ಕಾರ್ಯದಲ್ಲಿ ಮಾನ್ಯ ಶಾಸಕರ ಜೊತೆಗೆ ಅಧಿಕಾರಿಗಳು, ಗುತ್ತಿಗೆದಾರರು ಸಮಪಾಲು ಪಡೆದುಕೊಂಡು ಧನ್ಯರಾಗಿದ್ದಾರೆ.



ಸ್ಮಾರ್ಟ್ ಸಿಟಿಯಲ್ಲಿ ಹಣದ ಹೊಳೆಯೇ ಹರಿದುಬರುತ್ತಿದೆ. ಇದ್ದ ಕಾಂಕ್ರೀಟನ್ನು ತೆಗೆದು ಮತ್ತೆ ಅದೇ ಸ್ಥಳಕ್ಕೆ ಕಾಂಕ್ರೀಟ್ ಹಾಕುವುದು... ಒಮ್ಮೆ ಅಗೆಯುವುದು, ಮತ್ತೆ ಅದನ್ನೇ ಕಟ್ಟುವುದು ನಡೆದೇ ಇದೆ.. ಮಂಗಳೂರಿನ ಜನ ಮಾತ್ರ ಇದನ್ನು ನೋಡಿಯೂ ನೋಡದಂತೆ ಸುಮ್ಮನಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu