-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರದ ಟೀಸರ್ ನೋಡಿ ದಿಲ್ ಖುಷ್ ಆದ ಅಭಿಮಾನಿಗಳು!

ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರದ ಟೀಸರ್ ನೋಡಿ ದಿಲ್ ಖುಷ್ ಆದ ಅಭಿಮಾನಿಗಳು!

ಬೆಂಗಳೂರು: ಹಠಾತ್ ಆಗಿ ಎಲ್ಲರನ್ನೂ ಅಗಲಿ‌ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ  'ಜೇಮ್ಸ್' ಚಿತ್ರವನ್ನು ವೀಕ್ಷಿಸಲು ಸಿನಿ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್‌ಗಳು ಭಾರೀ ನಿರೀಕ್ಷೆಗಳನ್ನು ಹುಟ್ಟಿಸಿದೆ. ಸಖತ್ ವೈರಲ್ ಕೂಡಾ ಆಗುತ್ತಿವೆ. 




ಇದೀಗ, ಚಿತ್ರತಂಡವು ಟೀಸರ್ ರಿಲೀಸ್ ಮಾಡಿದ್ದು, ಅದು ಅಭಿಮಾನಿಗಳ ಮನಗೆದ್ದು ಕಮಾಲ್ ಮಾಡುತ್ತಿದೆ. 1.27 ನಿಮಿಷಗಳ 'ಜೇಮ್ಸ್' ಟೀಸರ್‌ನಲ್ಲಿ ಪುನೀತ್ ರಾಜ್‍ಕುಮಾರ್ ಪಾತ್ರದ ಒಂದು ಸಣ್ಣ ಪರಿಚಯವಿದ್ದು, ಅದನ್ನು ಕಂಡ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇದೊಂದು ಪಕ್ಕಾ ಆಕ್ಷನ್ ಪ್ಯಾಕ್ ಸಿನಿಮಾವಾಗಿದೆ ಎನ್ನುವುದಕ್ಕೆ ಟೀಸರ್ ಸಾಕ್ಷಿಯಾಗಿದೆ ಎಂದರೆ ತಪ್ಪಲ್ಲ. ಪುನೀತ್ ಪಾತ್ರಕ್ಕೆ ನಟ ಶಿವರಾಜ್ ಕುಮಾರ್ ಡಬ್ಬಿಂಗ್ ಮಾಡಿದ್ದಾರೆ. ಟೀಸರ್‌ನಲ್ಲಿರುವ 'ಭಾವನೆಗಳು ಬ್ಯುಸಿನೆಸ್‌ಗಿಂತ ದೊಡ್ಡದು - ಜೇಮ್ಸ್' ಎಂಬ ಬರಹ ಇದೀಗ ಅಭಿಮಾನಿಗಳನ್ನು ದಿಲ್ ಖುಷ್ ಮಾಡಿದೆ. 

ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಕಳೆದ ವರ್ಷ ಅ.29 ರಂದು ಏಕಾಏಕಿ ನಿಧನರಾಗಿದ್ದು ಎಲ್ಲರಿಗೂ ತೀವ್ರ ಆಘಾತ ಹಾಗೂ ಅಷ್ಟೇ ನೋವುಂಟುಮಾಡಿತ್ತು. ಹೀಗಾಗಿ , ಅಪ್ಪು ಕೊನೆಯ ಬಾರಿಗೆ ತೆರೆ ಮೇಲೆ ಮಿಂಚಲಿರುವ ಈ ಸಿನಿಮಾವನ್ನು ಅಭಿಮಾನಿಗಳು ತುಂಬು ಹೃದಯದಿಂದ ಆಧರಿಸುತ್ತಾ ಖುಷಿ ಪಡುತ್ತಿದ್ದಾರೆ.  ಬೆಂಗಳೂರಿನ ಹಲವೆಡೆ LED ಸ್ಕ್ರೀನ್ ಗಳನ್ನು ಹಾಕಿ  ಸಿನಿಮಾದ ಟೀಸರ್ ಅನ್ನು ನೋಡಿ ಅಭಿಮಾನಿಗಳು ಕಣ್ಣುಂಬಿಕೊಂಡರು. ಟೀಸರ್‌ನ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನು, 'ಜೇಮ್ಸ್' ಸಿನಿಮಾ ಮಾರ್ಚ್ 17 ರಂದು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಕಿಶೋರ್ ಪತ್ತಿಕೊಂಡ ಅವರು ಬಂಡವಾಳ ಹೂಡಿದ್ದಾರೆ. ನಟಿ ಪ್ರಿಯಾ ಆನಂದ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಶರತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ಶ್ರೀಕಾಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.



Ads on article

Advertise in articles 1

advertising articles 2

Advertise under the article

ಸುರ