-->
ಗಂಡು ಶಿಶು ಜನಿಸಬೇಕೆಂದು ಗರ್ಭಿಣಿ ತಲೆಗೆ ಮೊಳೆ ಹೊಡೆದ ಧರ್ಮಗುರು!

ಗಂಡು ಶಿಶು ಜನಿಸಬೇಕೆಂದು ಗರ್ಭಿಣಿ ತಲೆಗೆ ಮೊಳೆ ಹೊಡೆದ ಧರ್ಮಗುರು!

ಇಸ್ಲಾಮಾಬಾದ್‌: ಗಂಡು ಶಿಶು ಜನಿಸಬೇಕೆಂಬ ಕಾರಣಕ್ಕೆ ಮುಸ್ಲಿಂ ಧರ್ಮಗುರುವೋರ್ವನು ಗರ್ಭಿಣಿಯ ತಲೆಗೆ ಮೊಳೆ ಹೊಡೆದಿರುವ ಭಯಾನಕ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ.

ಈಗಾಗಲೇ ಈ ಗರ್ಭಿಣಿಯು ಮೂರು ಹೆಣ್ಣು ಮಕ್ಕಳ ತಾಯಿಯಾಗಿದ್ದಳು. ಇದೀಗ ಗರ್ಭದಲ್ಲಿರುವ ಮಗು ಗಂಡು ಶಿಶುವೇ ಆಗಬೇಕೆಂದು ಕೋರಿ ಆಕೆ ಧರ್ಮಗುರುವಿನ ಬಳಿ ತೆರಳಿದ್ದಾಳೆ.

ಈ ಧರ್ಮಗುರು ಸುಮಾರು 5 ಸೆಂ.ಮೀ. ಉದ್ದದ ಮೊಳೆಯೊಂದನ್ನು ಆಕೆಯ ತಲೆಯ ಮೇಲೆ ಹೊಡೆದಿದ್ದಾನೆ. ಅದೃಷ್ಟವಶಾತ್‌ ಆಕೆಯ ಮೆದುಳಿಗೆ ಯಾವುದೇ ಹಾನಿಯಾಗಿಲ್ಲ. ನೋವು ತಡೆಯಲಾರದ ಮಹಿಳೆ ಮೊಳೆಯನ್ನು ಕಟಿಂಗ್‌ ಪ್ಲೇಯರ್‌ ಸಹಾಯದಿಂದ ಹೊರಗೆ ತೆಗೆಯಲು ಪ್ರಯತ್ನಿಸಿದ್ದಾಳೆ. ಆದರೆ ಅದು ಸಾಧ್ಯವಾಗದಿದ್ದಾಗ ಆಕೆ ವೈದ್ಯರ ಬಳಿ ತೆರಳಿದ್ದಾಳೆ. ಆಗ ಈ ಭಯಾನಕ ಘಟನೆ ಬಹಿರಂಗಗೊಂಡಿದೆ.

ಇದೀಗ ಈ ವಿಚಾರ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ.

 

Ads on article

Advertise in articles 1

advertising articles 2

Advertise under the article