ಮದುವೆಯಾದ 10 ತಿಂಗಳಿಗೆ ದುರಂತ ಅಂತ್ಯಗೊಂಡ ದಂಪತಿ: ಸಾವಿನ ಕಾರಣ ನಿಗೂಢ

ಕೊಡಗು: ಮದುವೆಯಾದ ಹತ್ತೇ ತಿಂಗಳಿಗೆ ದಂಪತಿ ದುರಂತವಾಗಿ ಸಾವಿನ ಮನೆ ಸೇರಿದ ಸೇರಿರುವ ಘಟನೆಯೊಂದು ಕೊಡಗು ಜಿಲ್ಲೆಯ ಬಿರುನಾಣಿಯಲ್ಲಿ ನಡೆದಿದೆ.

ಯುವರಾಜ್ (25) ಹಾಗೂ ಪತ್ನಿ ಶಿಲ್ಪಾ (22) ಆತ್ಮಹತ್ಯೆ ಮಾಡಿಕೊಂಡ ದಂಪತಿ. 

ಶಿವಮೊಗ್ಗ ಮೂಲದ ಯುವರಾಜ್  ಹತ್ತು ತಿಂಗಳ ಹಿಂದೆಯಷ್ಟೇ ಶಿಲ್ಪಾರನ್ನು ಮದುವೆಯಾಗಿದ್ದರು. ಯುವರಾಜ್ ಕೊಡಗಿನಲ್ಲಿ ಫಾರೆಸ್ಟ್​ ಗಾರ್ಡ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದ್ದರಿಂದ ದಂಪತಿ ಪೊನ್ನಂಪೇಟೆಯ ಬಿರುನಾಣಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.  ಯುವರಾಜ್ ಎಂದಿನಂತೆ ಕರ್ತವ್ಯ ಮುಗಿಸಿ ಮನೆಗೆ ಬಂದ ವೇಳೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದ ಮನನೊಂದ ಯುವರಾಜ್ ಪತ್ನಿಯ ಕಳೇಬರವನ್ನು ಕೆಳಗಿಳಿಸಿ​ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. 

ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.