ತಲಪಾಡಿ: ದಾರಿಯಲ್ಲಿ ದೊರಕಿರುವ 1 ಲಕ್ಷ ರೂ. ಚಿನ್ನದ ಬ್ರಾಸ್ಲೈಟ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಶೀರ್ ಅಹ್ಮದ್


ತಲಪಾಡಿ: ದಾರಿಯಲ್ಲಿ ಸಿಕ್ಕಿದ್ದ ಸುಮಾರು 1 ಲಕ್ಷ ರೂ. ಅಧಿಕ ಮೌಲ್ಯದ ಚಿನ್ನದ ಬ್ರಾಸ್ಲೈಟ್ ಅನ್ನು ವಾರಸುದಾರರಿಗೆ ತಲುಪಿಸಿ ವ್ಯಕ್ತಿಯೋರ್ವರು ಪ್ರಾಮಾಣಿಕತೆ ಮೆರೆದ ಘಟನೆ ತಲಪಾಡಿಯಲ್ಲಿ ನಡೆದಿದೆ. 

ತಲಪಾಡಿ ಗ್ರಾಮದ ತಚ್ಚಾನಿ ರಸ್ತೆಯಲ್ಲಿ ಬಶೀರ್ ಅಹ್ಮದ್ ಉದ್ಯಾವರ ಎಂಬುವವರಿಗೆ ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನದ ಬ್ರಾಸ್ಲೈಟ್ ದೊರಕಿತ್ತು. ತಕ್ಷಣ ಅವರು ವಾಟ್ಸ್ಆ್ಯಪ್ ಮೂಲಕ ಬ್ರಾಸ್ಲೈಟ್ ದೊರಕಿರುವ ಬಗ್ಗೆ ಪ್ರಚಾರಪಡಿಸಿದ್ದರು‌. ಈ ಮೂಲಕ ಬ್ರಾಸ್ಲೈಟ್ ನ ವಾರಸುದಾರ ಮೋಹನ್ ಮಾಡ ಅವರನ್ನು ಪತ್ತೆ ಹಚ್ಚಲಾಯಿತು. ಇಂದು ತಲಪಾಡಿ ಗ್ರಾಮದ ಎಸ್ ಡಿಪಿಐ ಪಕ್ಷದ ಕಚೇರಿಯಲ್ಲಿ ಈ ಬ್ರಾಸ್ಲೈಟ್ ಅನ್ನು ಹಸ್ತಾಂತರಿಸಲಾಯಿತು.

ಬಶೀರ್ ಅಹ್ಮದ್ ರವರ ಮಾನವೀಯ ಗುಣವನ್ನು ಮೆಚ್ಚಿರುವ ಮೋಹನ್ ಮಾಡ ಅವರು ಬಶೀರ್ ಅಹ್ಮದ್ ಉದ್ಯಾವರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬಹುಮಾನವನ್ನು ನೀಡಿದರು.
BREAKING NEWS
Loading latest news...
Join our WhatsApp Channel Powered By : Online Pudu