ನಟಿ ದಿಶಾ ಪಟಾನಿ ಬಿಕಿನಿ ಪೋಟೊಗಳಿಗೆ ರೇಷ್ಮೆ ಸೀರೆ, ಜೀನ್ಸ್ ಪ್ಯಾಂಟ್, ಬುರ್ಖಾ ತೊಡಿಸಿದ ಟ್ರೋಲಿಗರು!

ಮುಂಬೈ: ನಟನೆ ಹಾಗೂ ಸಿನಿಮಾಗಳಿಗಿಂತಲೂ ತಮ್ಮ ಬೋಲ್ಡ್ ನೆಸ್ ನಿಂದ ಸಿಕ್ಕಾಪಟ್ಟೆ ಪ್ರಖ್ಯಾತರಾಗಿರುವ
ನಟಿ ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅದೇ ರೀತಿ ಅವರು ತಮ್ಮ ಸಖತ್ ಹಾಟ್ ಹಾಟ್ ಫೋಟೊಸ್ ಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿರುತ್ತಾರೆ.

ಸದ್ಯ ದಿಶಾ ಬಿಕಿನಿ ಧರಿಸಿ ಈಜುಕೊಳದಲ್ಲಿ ಮುಳುಗಿ ಒದ್ದೆಯಾಗಿ ನಿಂತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಸಿಕ್ಕಿದ್ದೇ ಅವಕಾಶ ಎಂದು ಬಳಸಿಕೊಂಡಿರುವ ಟ್ರೋಲಿಗರು ಆ ಫೋಟೊಗಳಿಗೆ ವಿವಿಧ ಉಡುಪುಗಳನ್ನು ಧರಿಸಿ ಹಿಗ್ಗಾ - ಮುಗ್ಗಾ ಟ್ರೋಲ್ ಮಾಡಿದ್ದಾರೆ.

ನಟಿ ದಿಶಾ ಪಟಾನಿಯ ಬಿಕಿನಿ ಫೋಟೋವನ್ನು ಎಡಿಟ್ ಮಾಡಿರುವ ಟ್ರೋಲಿಗರು ಅದೇ ಫೋಟೋಗೆ ರೇಷ್ಮೆ ಸೀರೆ ಉಡಿಸಿದ್ದಾರೆ. ಬಳಿಕ ಅದೇ ಫೋಟೋಗೆ ಶಾಲ್ ಹೊದಿಸಿ ಎಡಿಟ್ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ, ನಟಿಗೆ ಜೀನ್ ಪ್ಯಾಂಟ್ ಮತ್ತು ಸ್ಕರ್ಟ್ ಕೂಡ ತೊಡಿಸಿದ್ದಾರೆ. ಮತ್ತೊಂದೆಡೆ, ಅದೇ ಫೋಟೋಗೆ ಬುರ್ಖಾ ಕೂಡ ಹಾಕಲಾಗಿದೆ.

ಅದಷ್ಟಲ್ಲದೆ, ದಿಶಾ ಅವರಿಗೆ 'ತೊಟ್ಟುಕೊಳ್ಳಲು ಬಟ್ಟೆ' ಎಂಬ ಕಾಮೆಂಟ್‌ಗಳು ಮಾಡಿದ್ದಾರೆ.  ಹೀಗೆ, ಎಡಿಟ್ ಮಾಡಿರುವ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ನಿಜವಾದ ಬಿಕಿನಿ ಫೋಟೋಗಿಂತಲೂ  ಸಖತ್ ವೈರಲ್ ಆಗುತ್ತಿವೆ. ಆದರೆ ಇನ್‌ಸ್ಟಾಗ್ರಾಂನಲ್ಲಿ 50 ಮಿಲಿಯನ್ ಗೂ ಹೆಚ್ಚು ಹಿಂಬಾಲಕರನ್ನು  ಹೊಂದಿರುವ ನಟಿ ದಿಶಾ ಈ ಟ್ರೋಲ್‌ಗಳಿಗೆ ಕ್ಯಾರೆ ಮಾಡಲಿಲ್ಲ ಎನ್ನಲಾಗುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu