-->

ಹೊಸ ವರ್ಷದಲ್ಲಿ ವೈರಿಗಳು, ಎಫ್ಐಆರ್ ಬಾಧೆ ಕಡಿಮೆಯಾಗಲೆಂದು ತಿರುಪತಿ ಬಾಲಾಜಿ, ಕಾಳಹಸ್ತಿ ದೇವಾಲಯ ದರ್ಶನ ಮಾಡಿದ ಕಂಗನಾ

ಹೊಸ ವರ್ಷದಲ್ಲಿ ವೈರಿಗಳು, ಎಫ್ಐಆರ್ ಬಾಧೆ ಕಡಿಮೆಯಾಗಲೆಂದು ತಿರುಪತಿ ಬಾಲಾಜಿ, ಕಾಳಹಸ್ತಿ ದೇವಾಲಯ ದರ್ಶನ ಮಾಡಿದ ಕಂಗನಾ

ಹೈದರಾಬಾದ್: ತಮ್ಮ ನಟನೆ ಹಾಗೂ  ವಿವಾದಿತ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು. 

ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶನಿವಾರ ಕಂಗನಾ ಸೀರೆಯನ್ನು ಧರಿಸಿರುವ ಫೋಟೋಂದನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ನಟಿ , "ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ... ತಿರುಪತಿ ಬಾಲಾಜಿಯ ಆಶೀರ್ವಾದದೊಂದಿಗೆ ನನಗೆ ಈ ಹೊಸ ವರ್ಷ ಪ್ರಾರಂಭವಾಗುತ್ತಿದೆ ..." ಎಂಬ ಕ್ಯಾಪ್ಟನ್ ನೀಡಿದ್ದಾರೆ‌.

ಮತ್ತೊಂದು ಪೋಸ್ಟ್‌ನಲ್ಲಿ , ಕಂಗನಾ ತಿರುಪತಿಗೆ ಸಮೀಪವಿರುವ ಕಾಳಹಸ್ತಿ ದೇವಾಲಯದಲ್ಲಿ ರಾಹು - ಕೇತು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ಈ ರೀತಿಯಲ್ಲಿ ಬರೆದುಕೊಂಡಿದ್ದಾರೆ, ''ಈ ವರ್ಷ ತಾನು ಹೆಚ್ಚು ಪ್ರೀತಿ ಗಳಿಸಿ ಮತ್ತು ತನ್ನ ಮೇಲೆ ಪೊಲೀಸ್ ದೂರುಗಳು ಮತ್ತು ಎಫ್‌ಐಆರ್‌ಗಳು ದಾಖಲಾಗುವುದು ಕಡಿಮೆಯಾಗಬೇಕು" ಎಂದು ಆಶಿಸಿದ್ದಾರೆ. ಸದ್ಯ, ನಟಿಯ ಈ ಬಯಕೆ ತಮ್ಮ ಅಭಿಮಾನಿಗಳು ಮತ್ತು ವೈರಿಗಳ ಗಮನ ಕೂಡ ಸೆಳೆದಿದೆ.

Ads on article

Advertise in articles 1

advertising articles 2

Advertise under the article