-->
ಮನೆಯಲ್ಲಿಯೇ ತನ್ನದೇ ರಿವಾಲ್ವರ್ ನಿಂದ ಫೈರಿಂಗ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಇನ್ ಸ್ಪೆಕ್ಟರ್: ಗರ್ಭಿಣಿ ಪತ್ನಿ ಶಾಕ್!

ಮನೆಯಲ್ಲಿಯೇ ತನ್ನದೇ ರಿವಾಲ್ವರ್ ನಿಂದ ಫೈರಿಂಗ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಇನ್ ಸ್ಪೆಕ್ಟರ್: ಗರ್ಭಿಣಿ ಪತ್ನಿ ಶಾಕ್!

ವಿಜಯನಗರ: ಆಂಧ್ರ ಪ್ರದೇಶ ರಾಜ್ಯದ ವಿಜಯನಗರ ಜಿಲ್ಲೆಯ ಹೋಮ್​ ಗಾರ್ಡ್ಸ್​ ಉಸ್ತುವಾರಿ, ಸಶಸ್ತ್ರ ಮೀಸಲು ಪೊಲೀಸ್ ಇನ್ ಸ್ಪೆಕ್ಟರ್ ಓರ್ವರು ತಮ್ಮ ಸೇವಾ ರಿವಾಲ್ವರ್​ನಲ್ಲಿ ಫೈರಿಂಗ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ವಿಜಯನಗರ ಜಿಲ್ಲೆಯಲ್ಲಿರುವ ತಮ್ಮ ಪೊಲೀಸ್​ ವಸತಿಗೃಹದಲ್ಲಿ ಪಿ.ಈಶ್ವರ ರಾವ್​ (34) ಆತ್ಮಹತ್ಯೆ ಮಾಡಿಕೊಂಡ ಸಶಸ್ತ್ರ ಮೀಸಲು ಪೊಲೀಸ್ ಇನ್ ಸ್ಪೆಕ್ಟರ್.

ಈಶ್ವರ ರಾವ್​ ಅವರು ರವಿವಾರ ಮಧ್ಯಾಹ್ನ ತಮ್ಮ ಪೊಲೀಸ್ ವಸತಿಗೃಹಕ್ಕೆ ಆಗಮಿಸಿದವರೇ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡು ಫೈರಿಂಗ್​ ಮಾಡಿಕೊಂಡಿದ್ದಾರೆ. ಈ ಸಂದರ್ಭ ಈಶ್ವರ ರಾವ್​ ಪತ್ನಿ ಹರಿಪ್ರಿಯಾ ಮನೆಯಲ್ಲಿದ್ದರು. ಫೈರಿಂಗ್​ ಸದ್ದಿಗೆ ಆಘಾತಕ್ಕೆ ಒಳಗಾಗಿದ್ದ ಹರಿಪ್ರಿಯಾ, ಪತಿಯ ಸ್ಥಿತಿ ನೋಡಿ ತಕ್ಷಣ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ.

ಈಶ್ವರ್​ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲಾಗಲೇ ಈಶ್ವರ್​ ಮೃತಪಟ್ಟಿದ್ದರು. ಆಸ್ಪತ್ರೆಗೆ ಭೇಟಿ ನೀಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ. ದೀಪಿಕಾ ಪರಿಶೀಲನೆ ನಡೆಸಿದ್ದಾರೆ. ಈಶ್ವರ ರಾವ್​ ಪೂರ್ವ ಗೋದಾವರಿ ಜಿಲ್ಲೆಯ ವೇದುರುಪಕ ಸವರಮ್​ ಮೂಲದವರಾಗಿದ್ದರು. 2011ರಲ್ಲಿ ಆರ್​ಎಸ್​ಐ ಆಗಿ ಪೊಲೀಸ್​ ಇಲಾಖೆ ಸೇರಿ, 2020ರಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆದ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 

ನಾಲ್ಕು ವರ್ಷದ ಹಿಂದಷ್ಟೇ ಹರಿಪ್ರಿಯಾ ಎಂಬುವರನ್ನು ಮದುವೆಯಾಗಿದ್ದಾರೆ. ಅವರಿಗೆ ಮೂರು ವರ್ಷದ ಪುತ್ರಿಯಿದ್ದಾಳೆ. ಸದ್ಯ ಹರಿಪ್ರಿಯಾ 7 ತಿಂಗಳ ಗರ್ಭಿಣಿಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ಈಶ್ವರ್​ ರಾವ್​ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭವಾಗಿದೆ.

Ads on article

Advertise in articles 1

advertising articles 2

Advertise under the article