ಚೆನ್ನೈ: ಬ್ಯೂಟಿ ಪಾರ್ಲರ್ ನಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿರುವ ಕಾಮುಕರು ತ್ರಿಪುರಾ ರಾಜ್ಯದ ನಾಲ್ವರು ಹೆಣ್ಣು ಮಕ್ಕಳನ್ನು ಕರೆತಂದು ಅವರ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಭಾನುವಾರ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. 
ತ್ರಿಪುರಾದ ಶಿವಜಾಲಾ ಎಂಬಲ್ಲಿಂದ ಈ ನಾಲ್ವರು ಹೆಣ್ಣು ಮಕ್ಕಳನ್ನು ಬೆಂಗಳೂರು ಹಾಗೂ ಚೆನ್ನೈಗೆ ಆರೋಪಿಗಳು ರವಾನಿಸಿದ್ದರು. ಈ ನಾಲ್ವರನ್ನೂ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹೇಳಿ ಕಳುಹಿಸಕೊಡಲಾಗಿದೆ. ಆದರೆ,ಆ ಬಳಿಕ ಅವರನ್ನು ಚೆನ್ನೈಗೆ ಸ್ಥಳಾಂತರಿಸಲಾಗುತ್ತದೆ. 
ಬಳಿಕ ಜನವರಿ 17ರಂದು ಚೆನ್ನೈನ ಉಪನಗರ ಕೆಲಂಬಕ್ಕಮ್ನ ಪದೂರ್ನಲ್ಲಿನ ಮನೆಯೊಂದರಲ್ಲಿ ಬಂಧನದಲ್ಲಿ ಇಡಲಾಗುತ್ತದೆ. ಬಳಿಕ ಅಲಾಉದ್ದೀನ್, ಮೋಯಿದ್ದೀನ್, ಅನ್ವರ್ ಮತ್ತು ಹುಸೇನ್ ಎಂಬ ಕಾಮುಕರು ಈ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾರೆ. ಜ.26ರಂದು ಈ ಹೆಣ್ಣುಮಕ್ಕಳನ್ನು ಕೆಲ ರೆಸಾರ್ಟ್ಗೆ ಸಾಗಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯೆ 16 ವರ್ಷದ ಹುಡುಗಿಯೊಬ್ಬಳು ಹೇಗೋ ತಪ್ಪಿಸಿಕೊಳ್ಳುತ್ತಾಳೆ. 
ಅಲ್ಲಿಂದ ಓಡಿಹೋದ ಆಕೆ ಪೊಲೀಸ್ ಗಸ್ತು ವಾಹನವನ್ನು ಕಂಡು ಅದರಲ್ಲಿದ್ದ ಪೊಲೀಸರಲ್ಲಿ ನಡೆದಿರುವುದನ್ನು ವಿವರಿಸುತ್ತಾಳೆ. ತಕ್ಷಣ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುತ್ತಾರೆ. ಆದರೆ, ಆರೋಪಿಗಳನ್ನು ಸ್ಥಳದಿಂದ ಎಸ್ಕೇಪ್ ಆಗಿದ್ದು, ಕಾಮುಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ರಕ್ಷಣೆಯಾಗಿರುವ ನಾಲ್ವರನ್ನು ತ್ರಿಪುರಾಗೆ ವಾಪಸ್ ಕಳುಹಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.