-->

ಪತಿಗೆ ಫ್ರ್ಯಾಂಕ್ ವೀಡಿಯೋ ಮಾಡಲು ಹೋದ ನಿವೇದಿತಾ ಗೌಡ: ಗರಂ ಆದ ನೆಟ್ಟಿಗರು

ಪತಿಗೆ ಫ್ರ್ಯಾಂಕ್ ವೀಡಿಯೋ ಮಾಡಲು ಹೋದ ನಿವೇದಿತಾ ಗೌಡ: ಗರಂ ಆದ ನೆಟ್ಟಿಗರು

ಮಂಗಳೂರು: ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್​ ಇರೋದು ಎಲ್ಲರಿಗೂ ಗೊತ್ತಿರುವಂತದ್ದೇ. ಇನ್​ಸ್ಟಾಗ್ರಾಂನಲ್ಲಿ ಪತಿ ಚಂದನ್​ ಶೆಟ್ಟಿಯೊಂದಿಗೆ ಅನೇಕ ರೀಲ್ಸ್​ ಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಈ ರೀಲ್ಸ್ ಗಳಿಗೆ ಅಭಿಮಾನಿಗಳಿಂದ ಸಖತ್​ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ. ಆದರೆ ಕೆಲವೊಮ್ಮೆ ನೆಟ್ಟಿಗರು ಗರಂ ಆಗುತ್ತಾರೆ ಕೂಡಾ. 

ಹೌದು, ನಿವೇದಿತಾ ಗೌಡ ಇದೀಗ ಹಂಚಿಕೊಂಡಿರುವ ಹೊಸ ರೀಲ್ಸ್​ ಗೆ ಕೆಲ ನೆಟ್ಟಿಗರಿಂದ ಅಸಮಾಧಾನ ವ್ಯಕ್ತವಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಇದಕ್ಕೆ ಒಂದಷ್ಟು ನೆಗೆಟಿವ್​ ಕಮೆಂಟ್​ಗಳು ಬಂದಿವೆ. ಅಷ್ಟಕ್ಕೂ ಈ ರೀಲ್ಸ್​ನಲ್ಲಿ ನಿವೇದಿತಾ ಮಾಡಿದ್ದೇನು ಗೊತ್ತೇ?. ಆಕೆ ತಾನು ಧರಿಸಿರುವ ಟವೆಲ್​ ಅನ್ನು ಕ್ಯಾಮೆರಾ ಮುಂಭಾಗವೇ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ. ಇದನ್ನು ನೆಟ್ಟಿಗರು ಕೊಂಚ ಸೀರಿಯಸ್​ ಆಗಿ ಪರಿಗಣಿಸಿದ್ದಾರೆ.

ನಿವೇದಿತಾ ಗೌಡ ಫ್ರ್ಯಾಂಕ್​ ಮಾಡಲು ಪ್ರಯತ್ನಿಸಿದ್ದಾರೆ. ಅದಕ್ಕೆ ‘ನನ್ನ ಪತಿಗೆ ಫ್ರ್ಯಾಂಕ್ ಮಾಡುತ್ತೇನೆ’ ಎಂಬ ಕ್ಯಾಪ್ಷನ್​ನೊಂದಿಗೆ ಈ ವೀಡಿಯೋ ಆರಂಭ ಆಗುತ್ತದೆ. ಈ ವೀಡಿಯೋದಲ್ಲಿ ನಿವೇದಿತಾ ಗೌಡ ತಾವು ಧರಿಸಿದ್ದ ಟವೆಲ್​ ಅನ್ನು ಕ್ಯಾಮೆರಾ ಮುಂಭಾಗದಲ್ಲಿಯೇ ಕಿತ್ತು ಎಸೆಯುವಂತೆ ನಿವೇದಿತಾ ಗೌಡ ನಟಿಸುತ್ತಾರೆ. ಆಗ ಅಲ್ಲಿಯೇ ಇದ್ದ ಚಂದನ್ ಶೆಟ್ಟಿ ಅದನ್ನು ನಿಜವೆಂದು ನಂಬಿದ, ಪತ್ನಿಯ ಮಾನ ಕಾಪಾಡಲು ಓಡೋಡಿ ಬರುತ್ತಾರೆ. ಇಂಥದ್ದೊಂದು ನಾಟಕೀಯ ಪ್ರಸಂಗ ಈ ರೀಲ್ಸ್​ನಲ್ಲಿ ಇದೆ.

ಈ ವೀಡಿಯೋವನ್ನು ಪೋಸ್ಟ್​ ಮಾಡಿದ ಒಂದು ದಿನದೊಳಗೆ ಅಂದಾಜು 7 ಲಕ್ಷ ಮಂದಿ ಈ ವೀಡಿಯೋ ನೋಡಿದ್ದಾರೆ. ಕಮೆಂಟ್​ ಮಾಡಿದ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿವೇದಿತಾ ಗೌಡ ಬಹಳ ಬಾಲಿಶವಾಗಿ ವರ್ತಿಸುತ್ತಾರೆ. ಇದೆಲ್ಲ ಅತಿಯಾಯ್ತು. ಇದು ಫ್ರ್ಯಾಂಕ್ ಅಲ್ಲ, ಸ್ಕ್ರಿಪ್ಟೆಡ್​ ವೀಡಿಯೋ ಎಂದು ವಿಧವಿಧದಲ್ಲಿ ಕಮೆಂಟ್​ ಮಾಡಿದ್ದಾರೆ. ಆದರೆ ಇಂಥಹ ನೆಗೆಟಿವ್​ ಕಮೆಂಟ್​ಗಳ ಬಗ್ಗೆ ಚಂದನ್​ ಶೆಟ್ಟಿ ಅವರಾಗಲಿ, ನಿವೇದಿತಾ ಗೌಡ ಅವರಾಗಲಿ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100