-->
ಹೆಂಡ್ತಿಯೊಂದಿಗೆ ವಾಟ್ಸ್ಆ್ಯಪ್ ಚ್ಯಾಟ್ ಮಾಡುತ್ತಿದ್ದ ಸ್ನೇಹಿತನನ್ನೇ ಕೊಂದು ಭಸ್ಮ ಮಾಡಿದ!!!

ಹೆಂಡ್ತಿಯೊಂದಿಗೆ ವಾಟ್ಸ್ಆ್ಯಪ್ ಚ್ಯಾಟ್ ಮಾಡುತ್ತಿದ್ದ ಸ್ನೇಹಿತನನ್ನೇ ಕೊಂದು ಭಸ್ಮ ಮಾಡಿದ!!!

ಚಿಕ್ಕಬಳ್ಳಾಪುರ: ಪತ್ನಿಯೊಂದಿದೆ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡುತ್ತಿದ್ದ ಎಂದು ಸ್ನೇಹಿತನನ್ನೇ ಕೊಲೆಗೈದು ಭಸ್ಮ ಮಾಡಿರುವ ಭಯಾನಕ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 

ಮುತ್ತಕದಹಳ್ಳಿ ಗ್ರಾಮದ ಶಂಕರ್(28) ಮೃತ ದುರ್ದೈವಿ. ಅಶೋಕ ಎಂಬಾತ ಕೊಲೆಗೈದಿರುವ ಆರೋಪಿ.

ತನ್ನ ಪತ್ನಿಯೊಂದಿಗೆ ಸ್ನೇಹಿತ ಶಂಕರ್ ಅನೈತಿಕ ಸಂಬಂಧ ಹೊಂದಿದ್ದ ಎಂದು ಶಂಕಿಸಿದ್ದ ಅಶೋಕ ತನ್ನ ಇತರ ಸ್ನೇಹಿತರ ಜತೆಗೂಡಿ ಈ ಕೃತ್ಯ ಎಸಗಿದ್ದಾನೆ‌ ಎನ್ನಲಾಗಿದೆ. ಈ ಘಟನೆ ಗೌರಿಬಿದನೂರು ತಾಲೂಕಿನ ಕಂಬಾಲಪಲ್ಲಿ ಗ್ರಾಮದ ನೀಲಗಿರಿ ತೋಪಿನ ಬಳಿ ನಡೆದಿದೆ.
 
ಹಲವು ತಿಂಗಳಿಂದ ಶಂಕರ್‌ ಅಶೋಕನ ಪತ್ನಿಯೊಂದಿಗೆ ವಾಟ್ಸ್ಆ್ಯಪ್ ಚ್ಯಾಟಿಂಗ್ ಮಾಡುತ್ತಿದ್ದ. ಪದೇಪದೆ ತಿಳಿ ಹೇಳಿದ್ದರೂ ತನ್ನ ಚಾಳಿಯನ್ನು ಮುಂದುವರೆಸಿದ್ದ. ಇದರಿಂದ ಕೆರಳಿದ ಅಶೋಕ್ ಈ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಇನ್ನೊಂದೆಡೆ ಶಂಕರ್, ಅಶೋಕನ ಪತ್ನಿಯನ್ನು ಚುಡಾಯಿಸುತ್ತಿದ್ದ ಈ ಕಾರಣಕ್ಕಾಗಿ ಕೊಲೆ ನಡೆದಿದೆ ಎಂಬ ಮಾತೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಸತ್ಯಾಂಶ ಇನ್ನಷ್ಟೇ ಹೊರಬರಬೇಕಿದೆ.

Ads on article

Advertise in articles 1

advertising articles 2

Advertise under the article