-->

Advocate Jagannath No More- ಜನಾರ್ದನ ಪೂಜಾರಿಯವರ ಪ್ರಥಮ ಶಿಷ್ಯ, ಹಿರಿಯ ನೋಟರಿ/ವಕೀಲರಾದ ಎಂ. ಜಗನ್ನಾಥ ನಿಧನ

Advocate Jagannath No More- ಜನಾರ್ದನ ಪೂಜಾರಿಯವರ ಪ್ರಥಮ ಶಿಷ್ಯ, ಹಿರಿಯ ನೋಟರಿ/ವಕೀಲರಾದ ಎಂ. ಜಗನ್ನಾಥ ನಿಧನ

ಜನಾರ್ದನ ಪೂಜಾರಿಯವರ ಪ್ರಥಮ ಶಿಷ್ಯ, ಹಿರಿಯ ನೋಟರಿ/ವಕೀಲರಾದ ಎಂ. ಜಗನ್ನಾಥ ನಿಧನ





ಮಂಗಳೂರು ವಕೀಲರ ಸಂಘದ ಸದಸ್ಯರು, ಹಿರಿಯ ವಕೀಲರು ಹಾಗೂ ನೋಟರಿ ಆಗಿರುವ ಶ್ರೀ ಎಂ.ಜಗನಾಥ್ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ ಸುಮಾರು 89 ವರ್ಷ ವಯಸ್ಸಾಗಿತ್ತು.



ಕೇಂದ್ರದ ಮಾಜಿ ಸಚಿವ, ವಕೀಲರಾದ ಜನಾರ್ದನ ಪೂಜಾರಿಯವರಿಗೆ ವಕೀಲಿಕೆಯಲ್ಲಿ ಪ್ರಥಮ ಶಿಷ್ಯರಾಗಿದ್ದ ಜಗನ್ನಾಥ ಅವರು, ಪತ್ನ, ಇಬ್ಬರು ಪುತ್ರಿಯರು, ಒರ್ವ ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.



ಉಡುಪಿ ಜಿಲ್ಲೆಯ ಮಣಿಪುರ ಮೂಲದವಾಗಿದ್ದ ಅವರು, ಮಂಗಳೂರಿನ ಉರ್ವ ಮಾರ್ಕೆಟ್ ಬಳಿ ವಾಸವಾಗಿದ್ದರು.


ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಬಳಿ ಇರುವ ಜನಾರ್ದನ ಪೂಜಾರಿಯವರ ವಕೀಲರ ಕಚೇರಿಯಲ್ಲಿ ಕೆಲ ತಿಂಗಳ ಹಿಂದಿನ ವರೆಗೂ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಲ್ಲಿ ಅಸ್ವಸ್ಥರಾಗಿದ್ದರು.



ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದ ಜಗನ್ನಾಥ್, ಕಾನೂನು ಪದವಿ ಶಿಕ್ಷಣ ಪಡೆದು 1970ರಲ್ಲಿ ವಕೀಲರಾಗಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಸೇರಿದರು.



1977ರಲ್ಲಿ ಪೂಜಾರಿಯವರು ರಾಜಕೀಯ ಪ್ರವೇಶಿಸಿ ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಇಡೀ ಕಚೇರಿಯನ್ನು ಸಂಭಾಳಿಸಿದರು. 1991ರಲ್ಲಿ ನೋಟರಿ ಪಬ್ಲಿಕ್ ಆಗಿ ನೇಮಕವಾದರು.


ಶ್ರೀ ವೆಂಕಟೇಶ್ವರ ಶಿವಭಕ್ತಿ ಯುವಕ ಸಂಘದ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

Ads on article

Advertise in articles 1

advertising articles 2

Advertise under the article