-->
86 ವರ್ಷಗಳ ಜೈಲು‌ಶಿಕ್ಷೆಗೆ ಗುರಿಯಾಗಿದ್ದ ಪಾಕ್ ಸುಂದರಿ ಬಿಡುಗಡೆಗೆ ನಾಲ್ವರನ್ನು ಒತ್ತೆಯಾಳು ಮಾಡಿದ ಉಗ್ರರು: ಅಮೆರಿಕಾವನ್ನೇ ತಲ್ಲಣಗೊಳಿಸಿದ 2001ರಲ್ಲಿ ಭಯಾನಕ ಕೃತ್ಯದ ಹಿಂದಿನ ರೂವಾರಿ ಈಕೆ

86 ವರ್ಷಗಳ ಜೈಲು‌ಶಿಕ್ಷೆಗೆ ಗುರಿಯಾಗಿದ್ದ ಪಾಕ್ ಸುಂದರಿ ಬಿಡುಗಡೆಗೆ ನಾಲ್ವರನ್ನು ಒತ್ತೆಯಾಳು ಮಾಡಿದ ಉಗ್ರರು: ಅಮೆರಿಕಾವನ್ನೇ ತಲ್ಲಣಗೊಳಿಸಿದ 2001ರಲ್ಲಿ ಭಯಾನಕ ಕೃತ್ಯದ ಹಿಂದಿನ ರೂವಾರಿ ಈಕೆ

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಎಂದು ಖ್ಯಾತಿಯಾಗಿದ್ದ ಅಮೆರಿಕ  2001ರಂದು ಅಕ್ಷರಶಃ ನಲುಗಿ ಹೋಗಿತ್ತು. ಅಲ್ಲಿಯ ವಿಶ್ವ ವಾಣಿಜ್ಯ ಕಚೇರಿ ಹಾಗೂ ಪೆಂಟಗಾನ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ಭಯಾನಕ ಕೃತ್ಯದ ಹಿಂದಿನ ಸಂಚು ಬಹಿರಂಗಗೊಂಡಾಗ ಖುದ್ದು ಅಮೆರಿಕವೇ ಸ್ವತಃ ಹೌಹಾರಿ ಹೋಗಿತ್ತು. ಏಕೆಂದರೆ ಈ ಕೃತ್ಯದ ಹಿಂದೆ ಇದ್ದುದು 29 ವರ್ಷದ ಓರ್ವ ಯುವತಿಯಾಗಿದ್ದಳು. 

ಹೌದು ಅವಳೇ ಆಫಿಯಾ ಸಿದ್ದಿಕಿ. ಈಕೆ ಪಾಕಿಸ್ತಾನ ಮೂಲದ ಪ್ರಸಿದ್ಧ ನರವಿಜ್ಞಾನಿ. 2008ರಲ್ಲಿ ಅಪ್ಘಾನಿಸ್ತಾನದಲ್ಲಿ ಇವಳನ್ನು ಬಂಧನ ಮಾಡಲಾಗಿತ್ತು. ಪಾಕಿಸ್ತಾನದ ಅಲ್‌ ಕೈದಾ ಸಂಘಟನೆಯೊಂದಿಗೆ ಈಕೆಗೆ ನೇರ ಸಂಪರ್ಕ ಇರುವುದು ತಿಳಿದುಬಂದಿತ್ತು. ಸುದೀರ್ಘ ವಿಚಾರಣೆ ನಡೆದ ಬಳಿಕ 2010ರಲ್ಲಿ ಅಮೆರಿಕದ ನ್ಯಾಯಾಲಯ ಆಫಿಯಾಗೆ 86 ವರ್ಷಗಳ ಸುದೀರ್ಘ ಶಿಕ್ಷೆ ನೀಡಿತ್ತು. 

ಇದು ಅಮೆರಿಕದ ಇತಿಹಾಸದಲ್ಲಿಯೇ ನೀಡಿರುವ ನೀಡಿರುವ ಭಾರೀ ಸುದೀರ್ಘ ಶಿಕ್ಷೆಯಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಆಕೆಯ ಬಿಡುಗಡೆಗೆ ಪಾಕಿಸ್ತಾನ ಸರ್ಕಾರ ಹಲವಾರು ರೀತಿಯ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಶಿಕ್ಷೆ ಪ್ರಕಟಗೊಂಡ 12 ವರ್ಷಗಳ ಬಳಿಕ ಮತ್ತೆ ಆಫಿಯಾ ಸುದ್ದಿಯಾಗಿದ್ದಾಳೆ. ಇದಕ್ಕೆ ಕಾರಣ, ಜ.15ರಂದು ಟೆಕ್ಸಾಸ್ ಯಹೂದಿ ಪ್ರಾರ್ಥನಾ ಮಂದಿರಕ್ಕೆ ನುಗ್ಗಿರುವ ಉಗ್ರರು ಅಲ್ಲಿನ ಧರ್ಮಗುರು ಸೇರಿದಂತೆ ನಾಲ್ವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಯಹೂದಿ ಪ್ರಾರ್ಥನಾಲಯಕ್ಕೆ ನುಗ್ಗಿರುವ ಶಸ್ತ್ರಸಜ್ಜಿತ ಉಗ್ರರು ನಾಲ್ವರನ್ನು ಒತ್ತೆಯಾಳಾಗಿರಿಸಿಕೊಂಡು ಆಫಿಯಾಳ ಬಿಡುಗಡೆ ಮಾಡಿದರೆ ಇವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಮೆರಿಕಾಕ್ಕೆ ಬೇಡಿಕೆಯಿರಿಸಿದ್ದಾರೆ.

ಅಮೆರಿಕವನ್ನೇ ತಲ್ಲಣಗೊಳಿಸಿರುವ ಈ ಸುಂದರಿಯ ಹಿಂದೆ ಭಯಾನಕ ಕಥೆಯೇ ಇದೆ. ಅದೇನೆಂದರೆ, ಈಕೆ ಪೆಂಟಗಾನ್ ಮೇಲೆ ದಾಳಿ ನಡೆಸಿರುವುದಲ್ಲದೆ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ನೆಲೆಯೂರಿದ್ದಾಗ ಅಲ್ಲಿನ ಅಮೆರಿಕನ್ ಸೇನಾಧಿಕಾರಿಗಳನ್ನು ಹತ್ಯೆ ಮಾಡಲು ಕೂಡ ಆಫಿಯಾ ಪ್ರಯತ್ನಿಸಿದ್ದಳು. ಆಫಿಯಾ ಅಮೆರಿಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಬ್ರಾಂಡಿಸ್ ವಿವಿ ಮತ್ತು ಮೆಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದ್ದಳು. ಅಲ್ಲಿಂದ ಈಕೆ ಅಲ್‌ ಕೈದಾ ಉಗ್ರ ಸಂಘಟನೆಯ ಜತೆಗೆ ನಂಟು ಬೆಳೆಸಿಕೊಂಡಿದ್ದಳು. ವಿಶ್ವ ವಾಣಿಜ್ಯ ಕಚೇರಿ, ಪೆಂಟಗಾನ್ ಮತ್ತು ಇತರ ಸ್ಥಳಗಳ ಮೇಲೆ ದಾಳಿಗೆ ಸಂಚು ರೂಪಿಸಿರುವ ಹಿಂದಿರುವ ಮಾಸ್ಟರ್‌ ಮೈಂಡ್‌ ಈಕೆಯದ್ದೇ ಆಗಿತ್ತು. 

ಈಕೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದ ಅಮೆರಿಕ ಸೈನಿಕರ ಮೇಲೆ ಇವಳು ಗುಂಡು ಹಾರಿಸಿದ್ದಳು. ಬಂಧಿಸುವ ಮೊದಲು ಆಕೆಯ ಕೊಠಡಿಗೆ ಪರಿಶೀಲನೆಗೆ ತೆರಳಿದ್ದ ಅಮೆರಿಕ ಸೈನಿಕನಿಂದ ರೈಫಲ್ ಕಸಿದುಕೊಂಡು ಗುಂಡು ಹಾರಿಸಿದ್ದಳು. ಅಂತೂ 2008ರಲ್ಲಿ ಸೆರೆ ಸಿಕ್ಕಿದ್ದಳು. ಇವಳ ಬಳಿ ಬಾಂಬ್‌ಗಳ ತಯಾರಿಕೆಯ ಬಗ್ಗೆ ಬರೆಯಲಾಗಿದ್ದು ಕೈಬರಹದ ಟಿಪ್ಪಣಿಗಳು ದೊರಕಿತ್ತು. ಜತೆಗೆ ಅಮೆರಿಕದಲ್ಲಿ ಯಾವ ಯಾವ ಸ್ಥಳಗಳನ್ನು ಬ್ಲಾಸ್ಟ್‌ ಮಾಡಬಹುದು ಎಂಬ ಪಟ್ಟಿಯನ್ನು ಈಕೆ ಮಾಡಿದ್ದಳು. ಇವೆಲ್ಲದರ ವಿರುದ್ಧ ಕೋರ್ಟ್‌ನಲ್ಲಿ ಸಾಕ್ಷಿ ಸಾಬೀತಾಗಿತ್ತು. ಇವಳನ್ನು ಬಿಡಿಸುವ ಉದ್ದೇಶದಿಂದ ಕೋರ್ಟ್‌ನಲ್ಲಿ ಇವಳ ಪರ ವಕೀಲರು ಆಸಿಫಾ ಮಾನಸಿಕ ಅಸ್ವಸ್ಥೆ ಎಂದು ಹೇಳಿದ್ದರು. ಆದರೆ ಇದನ್ನು ಖುದ್ದು ಈಕೆಯೇ ಅಲ್ಲಗಳೆದು, ನಾನು ಚೆನ್ನಾಗಿದ್ದೇನೆ, ಮಾನಸಿಕ ಅಸ್ವಸ್ಥೆ ಅಲ್ಲ ಎಂಬ ಹೇಳಿಕೆ ಕೊಟ್ಟಿದ್ದಳು.

ಅಮೆರಿಕದ ಮ್ಯಾನ್​ಹಟನ್ ಕೋರ್ಟ್ ಈಕೆಗೆ 86 ವರ್ಷಗಳ ಶಿಕ್ಷೆ ವಿಧಿಸಿತ್ತು. ಪರಿಣಾಮ  ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವೇ ಆಗಿತ್ತು. ಅಲ್ಲದೆ ಅಮೆರಿಕದ ವಿರುದ್ಧ ಪ್ರತಿಭಟನೆ ನಡೆದವು. ಆ ಸಮಯದಲ್ಲಿ ಪ್ರಧಾನಿಯಾಗಿದ್ದ ಯೂಸುಫ್ ರಜಾ ಗಿಲಾನಿ ಆಫಿಯಾಳನ್ನು ‘ರಾಷ್ಟ್ರದ ಮಗಳು’ ಎಂದು ಕರೆದು ವಿಶ್ವದ ಕೆಂಗಣ್ಣಿಗೂ ಗುರಿಯಾಗಿದ್ದರು. 

ಆದರೆ ಗಿಲಾನಿ ಮಾತ್ರ ಆಕೆಯನ್ನು ಜೈಲಿನಿಂದ ಬಿಡುಗಡೆಗೊಳಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸದ್ಯ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಫೆಡರಲ್ ಜೈಲಿನಲ್ಲಿ ಈಕೆ ಬಂಧನದಲ್ಲಿದ್ದಾಳೆ. ಮೊದಲು ಪಾಕಿಸ್ತಾನದಲ್ಲಿ ಈಕೆಯ ಪರವಾಗಿ ಬಿಸಿಯಾಗಿದ್ದ ಹೋರಾಟ ಕ್ರಮೇಣ ತಣ್ಣಗಾಗುತ್ತಾ ಬಂದಿತ್ತು. ಆದರೆ ಇದೀಗ ಮತ್ತೆ ಈಕೆಯ ಬಿಡುಗಡೆಗೆ ಒತ್ತಾಯ ಮಾಡಿ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article