ಕೋವಿಶೀಲ್ಡ್ ಲಸಿಕೆಯಿಂದ 55 ವರ್ಷದ ವೃದ್ಧನ ಪಾರ್ಶ್ವವಾಯು ಶಮನ, ನಿಂತ ಧ್ವನಿ ಮರುಕಳಿಸಿತು!

ಬೊಕಾರೊ (ಜಾರ್ಖಂಡ್): 4 ವರ್ಷಗಳ ಹಿಂದೆ ಅಪಘಾತಕ್ಕೊಳಗಾಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಹಾಗೂ ತನ್ನ ಧ್ವನಿಯನ್ನೇ ಕಳೆದುಕೊಂಡಿದ್ದ 55 ವರ್ಷದ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ನಡೆಯಲು, ಮಾಡನಾಡಲು ಆರಂಭಿಸಿರುವ ವಿಚಿತ್ರ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಬೊಕಾರೊದ ಸಲ್ಗಾಡಿಹ್ ಗ್ರಾಮದ ದುಲರ್‌ ಚಂದ್ ಮುಂಡಾ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ “ಕೋವಿಶೀಲ್ಡ್ ಲಸಿಕೆಯನ್ನು ಜನವರಿ 4 ರಂದು ಪಡೆದುಕೊಂಡಿದ್ದೇನೆ. ಆ ಬಳಿಕ ಸ್ವಾಧೀನ ಕಳೆದುಕೊಂಡ ನನ್ನ ಕಾಲುಗಳಿಗೆ ಚೈತನ್ಯ ಶಕ್ತಿ ತುಂಬಿದ್ದು ಚಲಿಸಲು ಆರಂಭಿಸಿದ್ದೇನೆ" ಎಂದು ಹೇಳಿದ್ದಾರೆ.

ದುಲರ್‌ ಚಂದ್ ಮುಂಡಾ ಅವರ ಕುಟುಂಬದ ಪ್ರಕಾರ, 4 ವರ್ಷಗಳ ಹಿಂದೆ ಅಪಘಾತದ ಬಳಿಕ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದಲ್ಲದೆ, ಮಾತನಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದರು. ಆದರೆ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಈ ಪವಾಡ ಸಂಭವಿಸಿದೆ ಎಂದು ಹೇಳಿಕೊಂಡಿದ್ದಾರೆ.

ಬೊಕಾರೊನ ಸಿವಿಲ್ ಸರ್ಜನ್ ಡಾ. ಜಿತೇಂದ್ರ ಕುಮಾರ್ ಆಶ್ಚರ್ಯ ವ್ಯಕ್ತಪಡಿಸಿದ್ದು, ಈ ಬಗ್ಗೆ ವೈದ್ಯಕೀಯ ಇತಿಹಾಸವನ್ನು ವಿಶ್ಲೇಷಿಸಲು ವೈದ್ಯಕೀಯ ತಂಡವನ್ನು ರಚಿಸುವಂತೆ ಕೇಳಿಕೊಂಡಿದ್ದಾರೆ.

ಇದನ್ನು ನೋಡಿ ಆಶ್ಚರ್ಯವಾಗಿದೆ. ಆದರೆ ಈ ಬಗ್ಗೆ ವಿಜ್ಞಾನಿಗಳು ಖಚಿತಪಡಿಸಿಕೊಳ್ಳಬೇಕು. ದುಲರ್‌ ಚಂದ್ ಮುಂಡಾ ಕೆಲವು ದಿನಗಳಿಗಿಂತ ಹಳೆಯ ಅನಾರೋಗ್ಯ ಸ್ಥಿತಿಯಿಂದ ಚೇತರಿಸಿಕೊಂಡಿದ್ದರೆ. ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ನಾಲ್ಕು ವರ್ಷಗಳಲ್ಲಿ ಇದ್ದ ಸ್ಥಿತಿಯಿಂದ ಲಸಿಕೆ ತೆಗೆದುಕೊಂಡ ಬಳಿಕ ಇದ್ದಕ್ಕಿದ್ದಂತೆ ಚೇತರಿಸಿಕೊಂಡಿದ್ದಾರೆ ನಂಬಲಾಗುತ್ತಿಲ್ಲ” ಎಂದು ಡಾ.ಜಿತೇಂದ್ರ ಕುಮಾರ್ ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu